ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ; ಐದು ಉನ್ನತ ಖಾತೆಗಳ ಬೇಡಿಕೆ: ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ
ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕು ಎಂದು ಸುನ್ನಿ ಉಲ್ಮಾ ಮಂಡಳಿಯ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ. ಜೊತೆಗೆ ಐವರು ಮುಸ್ಲಿಂ ಶಾಸಕರನ್ನು ಗೃಹ, ಕಂದಾಯ, ಆರೋಗ್ಯ ಮತ್ತು ಇತರ ಇಲಾಖೆಗಳಂತಹ ಉತ್ತಮ ಖಾತೆಗಳ ಸಚಿವರನ್ನಾಗಿ ಮಾಡಬೇಕು ಎಂದು ಅವರು ಕೋರಿದ್ದಾರೆ. “ಉಪಮುಖ್ಯಮಂತ್ರಿ ಮುಸ್ಲಿಂ ಆಗಿರಬೇಕು, 30 ಸೀಟು ಕೊಡಿ ಎಂದು ಚುನಾವಣೆಗೂ ಮುನ್ನವೇ ಹೇಳಿದ್ದೆವು… ನಮಗೆ 15 ಸಿಕ್ಕಿದ್ದು, ಒಂಬತ್ತು ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಸುಮಾರು 72 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು […]