ಸೆ. 1ರಿಂದ ಪದವಿ ಕಾಲೇಜುಗಳ ಆನ್ ಲೈನ್ ತರಗತಿ ಆರಂಭ
ಬೆಂಗಳೂರು: ಯುಜಿಸಿ ಸೂಚನೆಯ ಮೇರೆಗೆ ಸೆಪ್ಟೆಂಬರ್ 1ರಿಂದ ಪದವಿ ಕಾಲೇಜುಗಳ ಆನ್ ಲೈನ್ ತರಗತಿ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಅಕ್ಟೋಬರ್ 1 ರಿಂದ ಕೊರೊನಾ ಮುಂಜಾಗೃತಾ ಕ್ರಮಗಳೊಂದಿಗೆ ಪದವಿ ಕಾಲೇಜುಗಳ ರೆಗ್ಯುಲರ್ ತರಗತಿಗಳು ಆರಂಭವಾಗಲಿದೆ ಎಂದು ತಿಳಿಸಿದೆ.