ಹಿರಿಯ ರಂಗಕರ್ಮಿ ಬಿ. ಜಯಶ್ರೀಗೆ ರಂಗಭೂಮಿ ಪ್ರಶಸ್ತಿ ಪ್ರದಾನ

ಉಡುಪಿ: ರಂಗಭೂಮಿ ಉಡುಪಿ ವತಿಯಿಂದ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರಿಗೆ ರಂಗ ಸಾಮ್ರಾಜ್ಞೆ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನಂತೆ ಈಗ ಸಂಸ್ಕೃತಿಯ ಕೊಡುಕೊಳ್ಳುವಿಕೆ ಆಗುತ್ತಿಲ್ಲ. ಅದು ಸಂಪೂರ್ಣ ಕುಂದಿದೆ. ಇದು ನನಗೆ ತುಂಬಾ ನೋವು ತಂದಿದೆ ಎಂದು ಹೇಳಿದರು. ಒಳ್ಳೆಯ ಕೆಲಸ ಮಾಡುವುದು ಕೆಲವರಲ್ಲಿ ಕೆಟ್ಟದಾಗಿ ಕಾಣುತ್ತೇ. ನಾನು ತಪ್ಪು ಮಾಡಿದರೆ ಪ್ರೇಕ್ಷಕರು ನನ್ನ ತಪ್ಪು […]