ಸೆಂಗೋಲ್ ಅಳವಡಿಕೆಗೆ ಅಭಿನಂದನೆ ಸಲ್ಲಿಸಿದ ರಜನಿಕಾಂತ್; ಹೊಸ ಸಂಸತ್ ಭವನದಲ್ಲಿ ಅಖಂಡ ಭಾರತ ಭಿತ್ತಿ ಚಿತ್ರ
ನವದೆಹಲಿ: ಸಂಸತ್ ಭವನದಲ್ಲಿ ತಮಿಳುನಾಡಿನ ಚೋಳ ರಾಜರ ಅಧಿಕಾರ ಹಸ್ತಾಂತರದ ಪ್ರತೀಕವಾದ ಸೆಂಗೋಲ್ ಅಳವಡಿಸಿದ್ದಕ್ಕಾಗಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ. “ತಮಿಳಿನ ಶಕ್ತಿಯ ಸಾಂಪ್ರದಾಯಿಕ ಸಂಕೇತವಾದ ರಾಜದಂಡವು (ಸೆಂಗೊಲ್) ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ತಮಿಳರನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಹೃದಯದ ಕೆಳಗಿನಿಂದ ಧನ್ಯವಾದಗಳು” ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಹಿಂದಿ ಚಿತ್ರನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಅನುಪಮ್ […]
ನೂತನ ಸಂಸತ್ ಭವನ ಕಟ್ಟಡದಲ್ಲಿ “ಸೆಂಗೋಲ್” ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ
ನವದೆಹಲಿ: ಇಂದು ಬೆಳಿಗ್ಗೆ ಹೊಸ ಸಂಸತ್ ಸದನದ ಆವರಣಕ್ಕೆ ಆಗಮಿಸಿದ ಮೋದಿ, ಮಹಾತ್ಮ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ನೂತನ ಕಟ್ಟಡದ ಉದ್ಘಾಟನೆಯ ಪೂಜೆಯಲ್ಲಿ ಪಾಲ್ಗೊಂಡರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಕಟ್ಟಡಾದ ಉದ್ಘಾಟನೆ ನಡೆಸಬೇಕು ಎಂದು ಒತ್ತಾಯಿಸಿ ಹಲವು ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನದ ಉದ್ಘಾಟನೆಗೆ ಚಾಲನೆ ನೀಡಿದರು. ನೂತನ ಕಟ್ಟಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನ […]
ಹೊಸ ಸಂಸತ್ ಭವನದಲ್ಲಿರಲಿದೆ ಸ್ವಾತಂತ್ರ್ಯದ ಪ್ರತೀಕವಾದ ಸೆಂಗೋಲ್: ಚೋಳ ರಾಜರ ಕಾಲದ ರಾಜದಂಡ ಹಸ್ತಾಂತರ ಪದ್ದತಿಗೆ ಪುನರ್ಜೀವ
ನವದೆಹಲಿ: ಬುಧವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂಬರುವ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸ್ಪೀಕರ್ ಸ್ಥಾನದ ಪಕ್ಕದಲ್ಲಿ ತಮಿಳುನಾಡಿನ ಐತಿಹಾಸಿಕ ರಾಜದಂಡವನ್ನು ಸ್ಥಾಪಿಸಲಿದ್ದಾರೆ ಎಂದು ಹೇಳಿದರು. “ಸೆಮ್ಮೈ” ಎಂಬ ತಮಿಳು ಪದದಿಂದ ಹುಟ್ಟಿಕೊಂಡಿರುವ ಸೆಂಗೋಲ್ ಪದದ ಅರ್ಥ “ಸದಾಚಾರ” ಎಂದಾಗಿದೆ. ಈ ರಾಜದಂಡವು ಸ್ವಾತಂತ್ರ್ಯದ ” ಐತಿಹಾಸಿಕ ಮಹತ್ವದ” ಸಂಕೇತವಾಗಿದೆ ಏಕೆಂದರೆ ಇದು ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ವರ್ಗಾವಣೆಯನ್ನು ಸೂಚಿಸುತ್ತದೆ ಎಂದು ಶಾ […]