ಸ್ವ ಉದ್ಯೋಗದಿಂದ ಉತ್ತಮ ಬದುಕು ರೂಪಿಸಲು ಸಾಧ್ಯ: ಮಂಜುನಾಥ್ ಮಣಿಪಾಲ

ಉಡುಪಿ: ದೇಶದಲ್ಲಿ ತಾಂತ್ರಿಕ ಕೌಶಲ್ಯತೆಗೆ ಭವಿಷ್ಯ ಉಜ್ವಲವಾಗಿದ್ದು, ದುಡಿಯುವ ಕೈಗಳಿಗೆ ಪ್ರಸ್ತುತ ನೂರಾರು ಕ್ಷೇತ್ರಗಳು ಕೈ ಬೀಸಿ ಕರೆಯುತ್ತಿವೆ ಎಂದು ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಹೇಳಿದರು. ಅವರು ಶುಕ್ರವಾರ ಮಣಿಪಾಲ ಕೆನರಾ ಬ್ಯಾಂಕ್ ಗ್ರಾಮೀಣ ತರಬೇತಿ ಸಂಸ್ಥೆಯಲ್ಲಿ ಮೊಬೈಲ್ ಫೋನ್ ರಿಪೇರಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಸರಕಾರಗಳು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಹೊಸ ಉದ್ದಿಮೆಗಳನ್ನು ಸ್ಥಾಪಿಸಬಹುದು. ಆ ಮೂಲಕ ತಮ್ಮ ಬದುಕನ್ನು […]