ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸ್ಪಿಕ್ ಮೆಕೆ’ ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸೆ.13 ರಂದು ಮಾಹೆಯ ಸಾಂಸ್ಕೃತಿಕ ಸಂಯೋಜನಾ ಸಮಿತಿಯ ವತಿಯಿಂದ .`ಸ್ಪಿಕ್ ಮೆಕೆ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಾರಂಪರಿಕ ಭಾರತೀಯ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಲಾಮಂಡಲಂ ಸುರೇಶ್ ಅವರ ಗಾಯನದಲ್ಲಿ, ಕಲಾಮಂಡಲಂ ರಾಜೀವ್‌ ಅವರ ಮೃದಂಗದಲ್ಲಿ ಕಲಾಮಂಡಲಂ ಮೋಹನಕೃಷ್ಣ ಅವರಿಂದ ಕಥಕ್ಕಳಿ ನೃತ್ಯ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಮಂಜುನಾಥ್ ಎ ಕೋಟ್ಯಾನ್, ಮಾಹೆಯ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. […]