ಜಗತ್ತಿನ ಅತಿದೊಡ್ಡ ವಾಣಿಜ್ಯ ಕಚೇರಿ ಸೂರತ್ ಡೈಮಂಡ್ ಬೋರ್ಸ್ ಅನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಅಹಮದಾಬಾದ್: ಅಮೇರಿಕಾದ ಪೆಂಟಗನ್ ಅನ್ನು ಮೀರಿಸಿರುವ ವಿಶ್ವದ ಅತಿದೊಡ್ಡ ವಾಣಿಜ್ಯ ಕಟ್ಟಡವಾದ ಸೂರತ್ ಡೈಮಂಡ್ ಬೋರ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಗುಜರಾತ್​ನಲ್ಲಿ ಉದ್ಘಾಟಿಸಿದರು. ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರ ಎಂದು ಗಿನ್ನಿಸ್ ದಾಖಲೆ ಮಾಡಿರುವ ‘ಸೂರತ್ ಡೈಮಂಡ್ ಬೋರ್ಸ್​’ ಅನ್ನು ಸೂರತ್‌ನ ಖಾಜೋದ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಸೂರತ್ ಡೈಮಂಡ್ ಬೋರ್ಸ್‌ನ ಮಹತ್ವವನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ ಸೂರತ್ ಡೈಮಂಡ್ ಬೋರ್ಸ್ ಸೂರತ್‌ನ ವಜ್ರ ಉದ್ಯಮದ ಚೈತನ್ಯ ಮತ್ತು ಬೆಳವಣಿಗೆಯನ್ನು ತೋರಿಸುತ್ತದೆ. ಇದು […]