ಸತ್ಯದ ತುಳುವೆರ್ ಉಡುಪಿ- ಮಂಗಳೂರು ಇದರ ಮಹಿಳಾ ಘಟಕದಿಂದ ಆಟಿಡೊಂಜಿ ದಿನ ಕಾರ್ಯಕ್ರಮ
ಉಡುಪಿ: ಸತ್ಯದ ತುಳುವೆರ್ ಉಡುಪಿ ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಮಲ್ಪೆ ಫಿಷರಿಶ್ ಸಭಾಂಗಣದಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಾಹಿತಿ ಸೌಮ್ಯ ಪುತ್ರನ್ ಉಡುಪಿ ಅವರ ಪತ್ತೆದಾರಿ ಕಾದಂಬರಿ ‘ಕತ್ತಲೆಯೋಲೊಂದು ಕಿರಣ’ ಮತ್ತು ‘ಆಗ ಸಂಜೆಯಾಗಿತ್ತು’ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಕುರ್ಕಾಲ್ ಹಾಗೂ ಗೌರವಾಧ್ಯಕ್ಷೆ ಗೀತಾಂಜಲಿ ಸುವರ್ಣ ಕೃತಿಗಳನ್ನು ಬಿಡುಗಡೆಗೊಳಿಸಿದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸತ್ಯದ ತುಳುವೆರ್ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಮೇಘ ಅಧ್ಯಕ್ಷತೆ ವಹಿಸಿದ್ದರು. […]