‘ಕೆಜಿಎಫ್-2’ ಚಿತ್ರದ ಸ್ಯಾಟ್ ಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2 ಚಿತ್ರದ ದಕ್ಷಿಣ ಭಾರತೀಯ ಭಾಷೆಯಗಳ ಸ್ಯಾಟ್ ಲೈಟ್ ಪ್ರಸಾರದ ಹಕ್ಕನ್ನು ಜೀ ವಾಹಿನಿ ಖರೀದಿಸಿದೆ. ಈ ಕುರಿತಾಗಿ ಹೊಂಬಾಳೆ ಫಿಲಂಸ್, ನಿರ್ದೇಶಕ ಪ್ರಶಾಂತ್ ನೀಲ್, ಯಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬರೋಬ್ಬರಿ ನೂರು ಕೋಟಿ ರೂ. ಕೊಟ್ಟು ಸ್ಯಾಟಲೈಟ್ ರೈಟ್ಸ್ ಖರೀದಿಸಿದೆ ಎಂದು ತಿಳಿದುಬಂದಿದೆ. […]