ವಿವೇಕ್ ಅಗ್ನಿಹೋತ್ರಿಯ ‘ದ ವ್ಯಾಕ್ಸೀನ್ ವಾರ್’ ನಲ್ಲಿ ಕಾಂತಾರ ಬೆಡಗಿ ಸಪ್ತಮಿಗೌಡ
ಮುಂಬಯಿ: ಕನ್ನಡ ಚಿತ್ರನಟಿ ಕಾಂತಾರ ಬೆಡಗಿ ಸಪ್ತಮಿಗೌಡ ಹಿಂದಿ ಚಿತ್ರಲೋಕದತ್ತ ಪಯಣ ಬೆಳೆಸಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯ ಮುಂಬರುವ ಚಿತ್ರ “ವ್ಯಾಕ್ಸೀನ್ ವಾರ್” ನಲ್ಲಿ ಪ್ರಮುಖ ಪಾತ್ರದಲ್ಲಿ ಸಪ್ತಮಿ ನಟಿಸಲಿದ್ದಾರೆ. ಈ ಬಗ್ಗೆ ನಿರ್ದೇಶಕ ವಿವೇಕ್ ರಂಜನ್ ಟ್ವೀಟ್ ಮಾಡಿದ್ದು, “ಸುಸ್ವಾಗತ ಸಪ್ತಮಿ ಗೌಡ, ದ ವ್ಯಾಕ್ಸೀನ್ ವಾರ್ ನ ನಿಮ್ಮ ಪಾತ್ರವು ಎಲ್ಲರ ಹೃದಯಗಳನ್ನು ಗೆಲ್ಲಲಿದೆ” ಎಂದಿದ್ದಾರೆ. ಚಿತ್ರದ ಬಗ್ಗೆ ಹರ್ಷಾತುರರಾಗಿರುವ ಸಪ್ತಮಿ ಚಿತ್ರದಲ್ಲಿ ನೀಡಿರುವ ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. […]