ರಾ.ಹೆ-169 ರಸ್ತೆ ಕಾಮಗಾರಿಗೆ ಅಡಚಣೆಯಾಗುವ ಮರಗಳ ತೆರವು: ಜೂನ್ 30 ರಂದು ಸಾರ್ವಜನಿಕ ಅಹವಾಲು ಸಭೆ
ಉಡುಪಿ: ಸಾಣೂರು ಜಂಕ್ಷನ್‌ನಿಂದ ಬಿರ್ಕನಕಟ್ಟೆ ರಸ್ತೆ ಅಭಿವೃದ್ಧಿ ರಾ.ಹೆ-169 ಅಡಿಯಲ್ಲಿ ಬರುವ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮೂಡಬಿದ್ರೆ ವಲಯ ವ್ಯಾಪ್ತಿಗೆ ಒಳಪಡುವ ಸಾಣೂರು ಗ್ರಾಮದ ಸರಕಾರಿ ಸ್ಥಳದಲ್ಲಿರುವ 537 ಮರಗಳನ್ನು ಹಾಗೂ ಕಾರ್ಕಳ ವ್ಯಾಪ್ತಿಗೆ ಒಳಪಡುವ ಪುಲ್ಕೇರಿ ಜಂಕ್ಷನ್‌ನಿಂದ ಸಾಣೂರುವರೆಗೆ ಸರಕಾರಿ ಸ್ಥಳದಲ್ಲಿರುವ 341 ಮರಗಳನ್ನು ಗುರುತಿಸಲಾಗಿದ್ದು, ಸದ್ರಿ ಮರಗಳಲ್ಲಿ ಕಾಮಗಾರಿಗೆ ಅಡಚಣೆಯಾದ ಮರಗಳನ್ನು ತೆರವುಗೊಳಿಸುವ ಕುರಿತು ಜೂನ್ 30 ರಂದು ಮಧ್ಯಾಹ್ನ 3 ಗಂಟೆಗೆ ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಏರ್ಪಡಿಸಲಾಗಿದೆ. […]