ನದಿ ನೀರಿನಲ್ಲಿ ಮುಳುಗಿಸಿ ಮರಳು ಗುತ್ತಿಗೆದಾರನ ಹತ್ಯೆ ಯತ್ನ: ದೂರು ದಾಖಲು

ಬ್ರಹ್ಮಾವರ: ಮರಳು ಗುತ್ತಿಗೆದಾರನೋರ್ವನನ್ನು ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಲು ವಿಫಲಯತ್ನ ನಡೆಸಿದ ಘಟನೆ ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ ಕುಕ್ಕುಡೆ ಭಜನಾ ಮಂದಿರದ ಬಳಿ ನಡೆದಿದೆ. ಕಾರ್ಕಳ ಇನ್ನಾ ಗ್ರಾಮದ ಮೈಕ್ರೋ ಇನ್ ಸಮೀಪದ ಕೊರಗ ಕಾಲೊನಿ ನಿವಾಸಿ ಕೃಷ್ಣ ಕೊರಗ (38) ಎಂಬವರು ಪರಿಶಿಷ್ಟ ಜಾತಿ ಮತ್ತು ಪಂಗಡ ಕೋಟಾದಡಿಯಲ್ಲಿ ಮರಳುಗಾರಿಕೆ ನಡೆಸಲು ಪರವಾನಿಗೆ ಪಡೆದುಕೊಂಡಿದ್ದಾರೆ. ಅದರಂತೆ ಮರಳುಗಾರಿಕೆ ನಡೆಸಲು ಬ್ರಹ್ಮಾವರ ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ ಕುಕ್ಕುಡೆ ಭಜನಾ […]