ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನದ ವಿರುದ್ದ ಮೇಲ್ಮನವಿ: ಸಿಆರ್‌ಝಡ್ ಮರಳು ಪರವಾನಿಗೆದಾರರ ಒಕ್ಕೂಟ ಚಿಂತನೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮರಳು ತೆಗೆಯುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಸರ್ಕಾರಕ್ಕೆ ನೀಡಿರುವ ನಿರ್ದೇಶನದ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ದಕ್ಷಿಣ ಕನ್ನಡ ಜಿಲ್ಲಾ ಸಿಆರ್‌ಝಡ್ ಮರಳು ಪರನಾನಿಗೆದಾರರ ಒಕ್ಕೂಟದ ಸದಸ್ಯರು ಚಿಂತನೆ ನಡೆಸುತ್ತಿದ್ದಾರೆ ಎಂದು  ಫೆಡರೇಶನ್ ಸಲಹೆಗಾರ ಮಯೂರ್ ಉಳ್ಳಾಲ್ ಹೇಳಿದ್ದಾರೆ. ಜೂನ್ 9 ರಂದು ಉಡುಪಿಯಲ್ಲಿ, ಉಡುಪಿ ಮತ್ತು ಕಾರವಾರದ ಮರಳು ಪರವಾನಗಿದಾರರ ಸಭೆ ಕರೆದು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಸಿಆರ್‌ಝಡ್‌ […]