ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ: ಭದ್ರತೆ ಹೆಚ್ಚಳ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿರುವುದು ಬೆಳಕಿಗೆ ಬಂದಿರುವ ಬೆನ್ನಲ್ಲೇ ಅವರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆ ಕರೆ ಮಾಡಿದವನು ತನ್ನನ್ನು ರಾಜಸ್ಥಾನದ ಜೋಧಪುರದ ರೋಕಿ ಭಾಯ್ ಎಂದು ಪರಿಚಯಿಸಿಕೊಂಡಿದ್ದು, ಏಪ್ರಿಲ್ 30 ರಂದು ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂಗೆ ಬಂದ ಕರೆಯಲ್ಲಿ, ರಾಜಸ್ಥಾನದ ಜೋಧಪುರದ ರೋಕಿ ಭಾಯ್ ಎಂದು ಗುರುತಿಸಿಕೊಂಡ ವ್ಯಕ್ತಿ ಏಪ್ರಿಲ್ 30 ರಂದು ನಟ ಸಲ್ಮಾನ್ ಖಾನ್ […]
ಮಂಗಳೂರು: ಚಿತ್ರ ನಟಿ ಪೂಜಾ ಹೆಗ್ಡೆ ಅಣ್ಣನ ಮದುವೆಯಲ್ಲಿ ಸಲ್ಮಾನ್ ಖಾನ್ ಭಾಗಿ
ಮಂಗಳೂರು: ಮಂಗಳೂರಿನಲ್ಲಿ ನಡೆದ ಪೂಜಾ ಹೆಗ್ಡೆ ಸಹೋದರನ ಮದುವೆಯಲ್ಲಿ ಚಿತ್ರನಟ ಸಲ್ಮಾನ್ ಭಾಗವಹಿಸಿರುವ ಚಿತ್ರಗಳು ಕಂಡುಬಂದಿವೆ. ಮುಂಬರುವ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಲ್ಲಿ ಪೂಜಾ ಹೆಗ್ಡೆ ಸಲ್ಮಾನ್ ಎದುರು ಜೋಡಿಯಾಗಿದ್ದಾರೆ. ಪೂಜಾ ಹೆಗ್ಡೆ ಅವರ ಸಹೋದರ ರಿಷಬ್ ಹೆಗ್ಡೆ ಜನವರಿ 30 ರಂದು ಶಿವಾನಿ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ.ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೈರಲ್ ಚಿತ್ರವೊಂದರಲ್ಲಿ, ಪೂಜಾ ಮತ್ತು ಸಲ್ಮಾನ್ ಖಾನ್ ನವವಿವಾಹಿತರೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಪೂಜಾ ಹೆಗ್ಡೆ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ […]