ಬೆಳ್ತಂಗಡಿ: ಸಾಯಿರಾಂ ಗ್ರೂಪ್ ವತಿಯಿಂದ ಆಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ
ಬೆಳ್ತಂಗಡಿ: ತುರ್ತು ಸಂದರ್ಭಗಳಲ್ಲಿ, 24×7 ಸೇವೆಯನ್ನು ನೀಡಲು ಬೆಳ್ತಂಗಡಿ ಸಾಯಿರಾಂ ಗ್ರೂಪ್ ವತಿಯಿಂದ ಆಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಬುಧವಾರ ಕುತ್ಯಾರು ಸೋಮನಾಥೇಶ್ವರ ದೇವರ ಆಶೀರ್ವಾದದೊಂದಿಗೆ ಆಂಬ್ಯುಲೆನ್ಸ್ ಸೇವೆಯು ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಸೀತಾರಾಮ್, ಪವನ್ ಬಂಗೇರ, ರಂಜಿತ್, ಚೇತನ್ ಆಚಾರ್ಯ, ಗಣೇಶ್ ಶೆಟ್ಟಿ, ತಾರಾನಾಥ್, ಮನೋಜ್, ಭುವನೇಶ್ ಉಪಸ್ಥಿತರಿದ್ದರು.