ರಸ್ತೆ ಅಗಲೀಕರಣಕ್ಕಾಗಿ ಮರ ತೆರವು: ಜುಲೈ14 ರಂದು ಬೆಳುವಾಯಿಯಲ್ಲಿ ಸಾರ್ವಜನಿಕ ಅಹವಾಲು ಸಭೆ
ಉಡುಪಿ: ಸಾಣೂರು ಜಂಕ್ಷನ್‌ನಿಂದ ಬಿರ್ಕನಕಟ್ಟೆ ರಸ್ತೆ ಅಭಿವೃದ್ಧಿಯಡಿಯಲ್ಲಿ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮೂಡಬಿದ್ರೆ ವಲಯ ವ್ಯಾಪ್ತಿಯ ಪಡುಮಾರ್ನಾಡಿನಿಂದ ಅಲಂಗಾರಿನ ವರೆಗೆ ಸರ್ಕಾರಿ ಸ್ಥಳದಲ್ಲಿ 357 ಮರಗಳನ್ನು ಹಾಗೂ ಬೆಳುವಾಯಿ ಗ್ರಾಮ ಪಂಚಾಯತ್‌ಗೆ ಒಳಪಡುವ ಸರಕಾರಿ ಸ್ಥಳದಲ್ಲಿ 514 ಮರಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಕಾಮಗಾರಿಗೆ ಅಡಚಣೆಯಾದ ಮರಗಳನ್ನು ತೆರವುಗೊಳಿಸುವ ಕುರಿತು ಜುಲೈ 14 ರಂದು ಮಧ್ಯಾಹ್ನ 3 ಗಂಟೆಗೆ ಬೆಳುವಾಯಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಸಾರ್ವಜನಿಕರು ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಭೆಯಲ್ಲಿ ಹಾಜರಾಗಿ […]