ಶ್ರೀ ಭುವನೇಂದ್ರ ಕಾಲೇಜು: ರೆಡ್ ಕ್ರಾಸ್ ಶಿಬಿರ ಉದ್ಘಾಟನೆ

ಕಾರ್ಕಳ: ಮಾನವತ್ವಕ್ಕೆ ಸಂಬಂಧ ಪಟ್ಟ ಸಂಸ್ಥೆ ರೆಡ್‌ಕ್ರಾಸ್. ಈ ಸಂಸ್ಥೆಯ ಮೂಲಕ ಎಲ್ಲಾ ರೀತಿಯ ಶಿಬಿರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಸೇವೆಯ ಮನೋಭಾವನೆಯನ್ನು ಹೆಚ್ಚಿಸಬೇಕು. ರೆಡ್‌ಕ್ರಾಸ್‌ನ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಸರ್ಕಾರದ ಸಹಕಾರವೂ ಇದೆ. ಈ ಸಂಸ್ಥೆಯು ಜಾತಿ, ಲಿಂಗ, ಮತ ಎಂಬ ಭೇದವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿ ಎಲ್ಲರಿಗೂ ಸೇವೆ ನೀಡುವ ಸಂಸ್ಥೆಯಾಗಿದೆ ಎಂದು ಉಡುಪಿಯ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಮತ್ತು ಇ.ಸಿ ಸದಸ್ಯ ರಾಜೀವ ಶೆಟ್ಟಿ ಹೇಳಿದರು. ಇವರು ಶ್ರೀ ಭುವನೇಂದ್ರ ಕಾಲೇಜಿನ ಯುವ ರೆಡ್‌ಕ್ರಾಸ್ […]