ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಲಲಿತಕಲಾ ಸಂಘದ ಚಟುವಟಿಕೆ ಉದ್ಘಾಟನೆ:

ಕಾರ್ಕಳ: ಜೀವನದಲ್ಲಿ ಏನ್ನಾದರೂ ಸಾಧನೆ ಮಾಡಲು ಪ್ರೇರಣೆ ಮುಖ್ಯವಾಗುತ್ತದೆ. ಪ್ರತಿಯೊಂದು ವಿಷಯಗಳಲ್ಲೂ ಪ್ರೇರಣೆಯನ್ನು ಕಾಣಬೇಕು ಆಗ ಮಾತ್ರ ಸಾಧಿಸುವ ಹುಮ್ಮಸ್ಸು ಬರುತ್ತದೆ ಎಂದು ನಟ, ಕಲಾವಿದ ಪೃಥ್ವಿ ಅಂಬರ್ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಲಲಿತಕಲಾ ಸಂಘದ ಪ್ರಸ್ತುತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಲೆ ಇದ್ದವನು ಎಲ್ಲಿ ಬೇಕಾದರೂ ಬದುಕಬಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುತ್ತದೆ ಆದರೆ ಅದನ್ನು ಹೊರ ತರುವ ರೀತಿ ತಿಳಿದಿರಬೇಕು. ಲಲಿತಕಲಾ ಸಂಘಗಳು ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಹೊರತರುವಲ್ಲಿ ಮುಖ್ಯ […]