ನಿಮ್ಮ ಮಗುವಿಗೆ ರೋಟಾವೈರಸ್ ಲಸಿಕೆ ನೀಡಲು ಮರೆಯಬೇಡಿ !:ರೋಟಾವೈರಸ್ ಲಸಿಕೆ ಯಾಕೆ ನೀಡಬೇಕು? ಇಲ್ಲಿದೆ ಮಾಹಿತಿ

ಉಡುಪಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು ಭಾರತದ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮವಾಗಿದ್ದು, ಇದು 2.9 ಕೋಟಿ ಗರ್ಭಿಣಿಯರು ಮತ್ತು 2.67 ಕೋಟಿ ನವಜಾತ ಶಿಶುಗಳ ಗುರಿ ಹೊಂದಿದೆ. ಲಸಿಕಾ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಲು ಭಾರತ ಸರ್ಕಾರವು ಹಲವು ಲಸಿಕೆಗಳನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪರಿಚಯಿಸಿದ್ದು, ನಮ್ಮ ರಾಜ್ಯದಲ್ಲಿ ರೋಟಾವೈರಸ್ ಲಸಿಕೆಯನ್ನು ಆಗಸ್ಟ್ 2019 ರಿಂದ ಪರಿಚಯಿಸಲಾಗುತ್ತಿದೆ. ರೋಟಾವೈರಸ್ ಲಸಿಕೆಯನ್ನು ಏಕೆ ನೀಡಬೇಕು? ಮಕ್ಕಳಲ್ಲಿ ರೋಟಾವೈರಸ್ ಸೋಂಕನ್ನು ನಿಯಂತ್ರಿಸಲು ರೋಟಾವೈರಸ್ ಲಸಿಕೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಅತಿಸಾರ ಭೇದಿಯು […]