ಕಾಷ್ಠ ಶಿಲ್ಪಿ  ಸುದರ್ಶನ್ ಆಚಾರ್ಯರ ಸಾಧನೆಗೆ  ಅಮೇರಿಕಾದ ಮಯೋನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಿಂದ ಪುರಸ್ಕಾರ

  ಉಡುಪಿ:  ರಥ ಶಿಲ್ಪಿ ಸುದರ್ಶನ್ ಆಚಾರ್ಯ ಕಾಷ್ಠಶಿಲ್ಪ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದ್ದು, ಈಗಾಗಲೇ ತಮ್ಮ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕಡಿಯಾಳಿ ತಿರುಗುವ ಮುಚ್ಚಿಗೆಯ ನಿರ್ಮಾತೃ ಕಾಷ್ಠ ಶಿಲ್ಪಿ ಇವರಾಗಿದ್ದು ಸದಾ ಕ್ರಿಯಾಶೀಲ ಯೋಚನೆಗಳೊಂದಿಗೆ ಶಿಲ್ಪ ಕಲೆಗಳನ್ನು ಮೂಡಿಸುತ್ತಾ ಜನ ಮನ ಗೆದ್ದಿದ್ದಾರೆ. ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಇವರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ನೀಡಿ ಸನ್ಮಾನಿಸಲಾಗಿದೆ.  

ಕಡಿಯಾಳಿ ತಿರುಗುವ ಮುಚ್ಚಿಗೆ ಖ್ಯಾತಿಯ ಕಾಷ್ಟಶಿಲ್ಪಿ ಸುದರ್ಶನ ಆಚಾರ್ಯರಿಗೆ ಕಾಷ್ಟಶಿಲ್ಪರತ್ನ ಪ್ರಶಸ್ತಿ

ಉಡುಪಿ: ಬೆಂಗಳೂರಿನ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ಯಲಹಂಕ ಇದರ ದಶಮಾನೋತ್ಸವದ ಪ್ರಯುಕ್ತ ನವೆಂಬರ್ 6 ರವಿವಾರದಂದು ಡಾ.ಬಿ.ಆರ್.ಅಂಬೇಡ್ಕರ್ ಭವನ ಯಲಹಂಕದಲ್ಲಿ “ವಿಕಾಸ ಸಂಭ್ರಮ-2022” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂಸ್ಥೆಯು ನೀಡುವ ಕಾಷ್ಠಶಿಲ್ಪರತ್ನ ಪ್ರಶಸ್ತಿಗೆ ಕಡಿಯಾಳಿ ದೇವಸ್ಥಾನದ ತಿರುಗುವ ಮುಚ್ಚಿಗೆ ನಿರ್ಮಾತೃ ಖ್ಯಾತ ಕಾಷ್ಠಶಿಲ್ಪಿ, ರಥ ಶಿಲ್ಪಿ ಸುದರ್ಶನ ಆಚಾರ್ಯ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಕಾಷ್ಠಶಿಲ್ಪದಲ್ಲಿ ವಿಶೇಷ ಸಾಧನೆ ಮಾಡಿದ ಶಿಲ್ಪಿ ಚಂದ್ರಯ್ಯ ಆಚಾರ್ಯ ಕಳಿ, ಶಿಲ್ಪಿ ರಾಜಗೋಪಾಲ್ ಆಚಾರ್ಯ ಕೋಟೇಶ್ವರ, ಶಿಲ್ಪಿ ಹರೀಶ್ ಆಚಾರ್ಯ ಕಲ್ಲಮುಂಡ್ಕೂರು, ಬಂಬ್ರಾಣ ಯಜ್ಞೇಶ್ ಆಚಾರ್ಯ […]

ರಾಜ್ಯದ ಪ್ರಪ್ರಥಮ ತಿರುಗುವ ಮುಚ್ಚಿಗೆ! 1500 ವರ್ಷ ಇತಿಹಾಸವಿರುವ ಕಡಿಯಾಳಿ ದೇವಸ್ಥಾನದಲ್ಲಿ ವಾಸ್ತುಕಲೆಯ ಅದ್ಭುತ ನಿದರ್ಶನ!!

ಉಡುಪಿ: ಇತಿಹಾಸ ಪ್ರಸಿದ್ದ, ಸುಮಾರು 1500 ವರ್ಷ ಇತಿಹಾಸವಿರುವ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ವಾಸ್ತುಕಲೆಯ ಅತ್ಯದ್ಭುತ ನಿದರ್ಶನವೊಂದು ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮರದಿಂದ ಮಾಡಿದ ತಿರುಗುವ ಮುಚ್ಚಿಗೆಯನ್ನು ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ನಿರ್ಮಾಣ ಮಾಡಲಾಗಿದೆ. ಜೂನ್ 1 ರಿಂದ ಜೂನ್ 10ರ ತನಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗಲಿದ್ದು, ಈ ತಿರುಗುವ ಮುಚ್ಚಿಗೆಯು ಅತಿ ದೊಡ್ಡ ಆಕರ್ಷಣೆಯಾಗಲಿದೆ.