ಹಡಿಲುಗದ್ದೆ ಕೃಷಿಯೋಜನೆಗೆ ಉಡುಪಿ-ಮಣಿಪಾಲ ರೋಟರಿಯಿಂದ ನೆರವು

ಉಡುಪಿ: ನಿಟ್ಟೂರು ಪ್ರೌಢ ಶಾಲೆ ತನ್ನ ಸುವರ್ಣಪರ್ವದ ನಿಮಿತ್ತ ಹಮ್ಮಿಕೊಂಡ 50 ಎಕರೆ ಹಡಿಲುಗದ್ದೆ ಬೇಸಾಯ ಯೋಜನೆಗೆ ಉಡುಪಿ-ಮಣಿಪಾಲ ರೋಟರಿ ಸಂಸ್ಥೆಯು ತನ್ನ ಸಾಮಾಜಿಕ ಸೇವೆಯ ಅಂಗವಾಗಿ ರೂ. 75,000/-ದ ದೇಣಿಗೆ ನೀಡಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಿತು. ಪೆರಂಪಳ್ಳಿ ಗದ್ದೆಯ ಸನಿಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿಯ ಅಧ್ಯಕ್ಷ ಪ್ರಶಾಂತ ಹೆಗ್ಡೆ, ಕಾರ್ಯದರ್ಶಿ ಶ್ರೀಪತಿ ಪೂಜಾರಿ, ಸದಸ್ಯರುಗಳಾದ ರವಿ ಕಾರಂತ್, ಡಾ. ವಿರೂಪಾಕ್ಷ ದೇವರುಮನೆ, ಅಮಿತ್ ಅರವಿಂದ, ರಾಜವರ್ಮ ಅರಿಗ ಉಪಸ್ಥಿತರಿದ್ದು ಶಾಲೆಯ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಅಭಿನಂದಿಸಿದರು. […]