ರೋಟರಾಕ್ಟ್ ಕ್ಲಬ್ ಉಡುಪಿಯ ನೂತನ ಅಧ್ಯಕ್ಷೆಯಾಗಿ ರೋಟರಾಕ್ಟರ್ ತನ್ವಿ ವಿಶಿಷ್ಟ ಅಧಿಕಾರ ಸ್ವೀಕಾರ
ಉಡುಪಿ: ರೋಟರಿ ಜಿಲ್ಲೆ 3182, ವಲಯ 4ರ ಪ್ರತಿಷ್ಟಿತ ರೋಟರಾಕ್ಟ್ ಕ್ಲಬ್ ಉಡುಪಿ ಇದರ 2023-24ನೇ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಜು.16 ರಂದು ಸಂಜೆ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು. ಪದ ಪ್ರಧಾನ ಅಧಿಕಾರಿ, ರೋಟರಿ ಉಡುಪಿಯ ಅಧ್ಯಕ್ಷೆ ರೋ. ದೀಪಾ ಭಂಡಾರಿಯವರು ನೂತನ ಅಧ್ಯಕ್ಷೆ ರೋಟರಾಕ್ಟರ್ ತನ್ವಿ ವಿಶಿಷ್ಟ ಅವರಿಗೆ ಹಾಗೂ ಕಾರ್ಯದರ್ಶಿ ರೋಟರಾಕ್ಟರ್ ಅಂಶ್ ಕೋಟ್ಯಾನ್ ಅವರಿಗೆ ಪದ ಪ್ರಧಾನ ಮಾಡಿ, ಪ್ರಮಾಣ ವಚನ ಭೋದಿಸಿದರು. ಮುಖ್ಯ ಅತಿಥಿಗಳಾದ ರೋಟರಾಕ್ಟ್ ಜಿಲ್ಲಾ […]