ದೇವಸ್ಥಾನಕ್ಕೂ ಬಂತು ರೋಬೋಟ್ ತಂತ್ರಜ್ಞಾನ: ಕೇರಳದ ದೇವಸ್ಥಾನಕ್ಕೆ ಪೇಟಾ ಸಂಸ್ಥೆಯಿಂದ ಯಾಂತ್ರಿಕ ಆನೆ ಕೊಡುಗೆ
ತ್ರಿಶೂರು: ಇದೇ ಮೊದಲ ಬಾರಿಗೆ, ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀ ಕೃಷ್ಣ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಲು ಜೀವ ಇರುವಂತೆ ಕಾಣುವ ಯಾಂತ್ರೀಕೃತ ಆನೆಯನ್ನು ಬಳಸಲಾಗಿದ್ದು, ಇದನ್ನು ನಟಿ ಪಾರ್ವತಿ ತಿರುವೋತ್ತು ಅವರ ಬೆಂಬಲದೊಂದಿಗೆ ಪೇಟಾ ಇಂಡಿಯಾ ಸಂಸ್ಥೆಯು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ. ಇರಿಂಜದಪಿಲ್ಲಿ ರಾಮನ್ ಎಂಬ ಹೆಸರಿನ ಯಾಂತ್ರಿಕ ಆನೆಯು ಹತ್ತೂವರೆ ಅಡಿ ಎತ್ತರ ಮತ್ತು 800 ಕೆಜಿ ತೂಕವಿದೆ. ಸುಮಾರು 4 ಜನರನ್ನು ಸಾಗಿಸುವ ಸಾಮರ್ಥ್ಯ […]