ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಹಣ ದೋಚಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಉಡುಪಿ: ಗುಜರಿ ಹೆಕ್ಕಿಕೊಂಡು ಬದುಕು ಸಾಗಿಸುತ್ತಿದ್ದ 78 ವರ್ಷ ಪ್ರಾಯದ ವೃದ್ದೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಬಳಿಯಿದ್ದ ನಗದನ್ನು ಅಪಹರಿಸಿದ್ದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಶಿವಮೊಗ್ಗ ಮೂಲದ ಇರ್ಫಾನ್ ಆತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ಉಡುಪಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2017 ಜೂನ್ 5 ರಂದು ಉಡುಪಿ ಪರಿಸರದಲ್ಲಿ ಗುಜರಿ ಮಾರಾಟ ಮಾಡಿಕೊಂಡು ಬದುಕುತ್ತಿದ್ದ ವೃದ್ಧೆಯನ್ನು ತೆಂಕಪೇಟೆ ಪರಿಸರದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿ […]
ದೈವಸ್ಥಾನದ ಬಾಗಿಲು ಮುರಿದು ದೈವದ ಸೊತ್ತು ಕಳವು: ದೂರು ದಾಖಲು
ಉಡುಪಿ: ದೈವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿ ತಾಲೂಕಿನ ಹಿರೇಬೆಟ್ಟು ಗ್ರಾಮದ ಬಾಳ್ಕಟ್ಟು ಬೀಡು ಎಂಬಲ್ಲಿ ಮೇ.6ರಂದು ಬೆಳಕಿಗೆ ಬಂದಿದೆ. ಬ್ರಹ್ಮಗಿರಿಯ ಪೃಥ್ವಿರಾಜ ಬಿ ಶೆಟ್ಟಿ ಎಂಬವರ ಕುಟುಂಬದ ಬಾಳ್ಕಟ್ಟು ಬೀಡು ಮನೆಯ ಆವರಣದಲ್ಲಿರುವ ದೈವದ ಮನೆಯಲ್ಲಿ ಕಳ್ಳತನ ನಡೆದಿದೆ. ಯಾರೋ ಕಳ್ಳರು ದೈವದ ಮನೆಯ ಚಿಲಕ ಮುರಿದು ಒಳ ಪ್ರವೇಶಿಸಿ 51 ಸಾವಿರ ರೂ. ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸೊತ್ತುಗಳನ್ನು […]