ಬೈಂದೂರು: ಕಳಪೆ ರಸ್ತೆಯಿಂದ ಅಪಘಾತ; ಚಿಕಿತ್ಸೆ ವೆಚ್ಚವನ್ನು ಗುತ್ತಿಗೆದಾರರು ಭರಿಸುವಂತೆ ಮೋದಿ ಬ್ರಿಗೇಡ್ ಮನವಿ
ಬೈಂದೂರು: ಕರ್ನಾಟಕ ನೀರಾವರಿ ನಿಗಮದ ವರಾಹಿ ಯೋಜನೆಯಲ್ಲಿ ಅತ್ಯಂತ ಕಳಪೆ ಕಾಮಗಾರಿಯಿಂದ ಹಾಗೂ ಅಗೆದ ರಸ್ತೆಗಳನ್ನು ಮುಚ್ಚದೆ ಇರುವುದರಿಂದ ರಸ್ತೆಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದೆ. ಈಗಾಗಲೇ ಶಿರೂರು ಮೂರ್ಕೈಯ ಜಿ. ಮಧು ಹಾಗೂ ಗುಲ್ವಾಡಿಯ ಹರೀಶ್ ಪೂಜಾರಿ ಎಂಬ ಇಬ್ಬರು ವ್ಯಕ್ತಿಗಳು ಅಪಘಾತಕ್ಕೊಳಗಾಗಿ ಮಣಿಪಾಲದ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಇವರ ಚಿಕಿತ್ಸೆಯ ವೆಚ್ಚವನ್ನು ಸಂಬಂಧಪಟ್ಟ ಗುತ್ತಿಗೆದಾರರು ಭರಿಸುವಂತೆ ಕೋರಿ ರಾಜ್ಯ ಮೋದಿ ಬ್ರಿಗೇಡ್ ವತಿಯಿಂದ ಬೈಂದೂರು ಕ್ಷೇತ್ರದ ಸಿದ್ದಾಪುರದ ವಾರಾಹಿ ಯೋಜನೆಯ ಕಾರ್ಯಪಾಲಕ ಅಭಿಯಂತರದಾಸೇಗೌಡರವರಿಗೆ ಮನವಿ […]
ರಸ್ತೆ ಅಪಘಾತ: ಚಿಕಿತ್ಸೆ ಫಲಿಸದೆ ಸವಾರ ಮೃತ್ಯು
ಕಾರ್ಕಳ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಕಾರ್ಕಳ ರೆಂಜಾಳ ನಿವಾಸಿ 63 ವರ್ಷದ ಅಜಿತ್ ಕುಮಾರ್ ಮೃತ ಬೈಕ್ ಸವಾರ. ಇವರು ಮೇ 2ರಂದು ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಕಸಬಾ ಗ್ರಾಮದ ಗ್ಯಾಸ್ ಗೋಡೌನ್ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಒಮ್ಮೇಲೆ ಬ್ರೇಕ್ ಹಾಕಿದ್ದರು. ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಅಜಿತ್ ಗಂಭೀರ ಗಾಯಗೊಂಡಿದ್ದರು. […]
ರಸ್ತೆ ಅಪಘಾತ: ಆರೋಪಿಗೆ ಜೈಲು ಶಿಕ್ಷೆ
ಉಡುಪಿ: ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿ, ಗಾಯಗೊಳಿಸಿದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2017 ಅಕ್ಟೋಬರ್ 05 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಶಿವಳ್ಳಿ ಗ್ರಾಮದ ಕಲ್ಸಂಕ ಗುಂಡಿಬೈಲು ಬಳಿ ಮರ್ವಿನ್ ವಿಲ್ಫ್ರೆಡ್ ಡಿಸೋಜಾ ಎಂಬಾತನು ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ದೊಡ್ಡಣಗುಡ್ಡೆ ಕಡೆಗೆ ತೆರಳಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದ ಪ್ರಕಾಶ ಶೆಟ್ಟಿಯವರ ಟಿ.ವಿ.ಎಸ್ ಜುಪಿಟರಿನ ಬಲಬದಿಗೆ ಢಿಕ್ಕಿ ಹೊಡೆದ […]
ಅಪಘಾತದಿಂದ ಸಾವು: ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಉಡುಪಿ: ಅತಿವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿ, ಹಿಂಬದಿ ಕುಳಿತಿದ್ದ ಮಹಿಳೆಯ ಸಾವಿಗೆ ಕಾರಣವಾದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2017 ಅಕ್ಟೋಬರ್ 21 ರಂದು ಸಂಜೆ 5.15 ರ ಸುಮಾರಿಗೆ ಪ್ರತಾಪ ಸುದರ್ಶನ ಶೆಟ್ಟಿ ಎಂಬಾತನು ಜಯಲಕ್ಷಿ ಎಂಬ ಮಹಿಳೆಯನ್ನು ಬೈಕಿನ ಹಿಂಬದಿ ಕೂರಿಸಿಕೊಂಡು, ಅತಿವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸುತ್ತಿದ್ದಾಗ, ಉಡುಪಿ ತಾಲೂಕು ಪುತ್ತೂರು ಗ್ರಾಮದ ರೊಬೋಸಾಫ್ಟ್ ಟೆಕ್ನಾಲಜೀಸ್ […]
ಕಾಪು: ಆ್ಯಂಬುಲೆನ್ಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು
ಕಾಪು: ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಪುವಿನ ಕೋತಲ್ ಕಟ್ಟೆಯ ರಾ.ಹೆ. 66ರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಉಳಿಯಾರಗೋಳಿ ಗ್ರಾಮದ ಕೆಳತೋಟ ನಿವಾಸಿ ಗೋವಿಂದ ಪೂಜಾರಿ (65) ಎಂದು ಗುರುತಿಸಲಾಗಿದೆ. ಗೋವಿಂದ ಪೂಜಾರಿ ರಸ್ತೆ ದಾಟಲು ನಿಂತಿದ್ದರು. ಈ ವೇಳೆ ಅವರಿಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದ್ದು, ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ […]