ರಸ್ತೆ ಅಪಘಾತ: ಯಕ್ಷಗಾನ ಭಾಗವತ ಮೃತ್ಯು
ಸುಬ್ರಹ್ಮಣ್ಯ: ಕುಲ್ಕುಂದದಲ್ಲಿ ಶನಿವಾರ ಮುಂಜಾನೆ ನಡೆದ ಅಪಘಾತದಲ್ಲಿ ಯಕ್ಷಗಾನದ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅವರು ಮೃತಪಟ್ಟಿದ್ದಾರೆ. ರಾಮಚಂದ್ರ ಸಹೋದರನ ಜತೆ ಸುಬ್ರಹ್ಮಣ್ಯದಿಂದ ಕುಲ್ಕುಂದಕ್ಕೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಕಡವೆ ಅಡ್ಡ ಬಂದಿದ್ದು,ಇದರ ಪರಿಣಾಮ ಸ್ಕೂಟರ್ ಪಲ್ಟಿಯಾಗಿದೆ. ರಾಮಚಂದ್ರ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತರಾಗಿದ್ದಾರೆ. ಸಹೋದರ ರವಿ ಅವರಿಗೂ ಗಾಯಗಳಾಗಿವೆ. ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಉತ್ತಮ ಕ್ರಿಕೆಟ್, ಹಾಗೂ ರಾಜ್ಯಮಟ್ಟದ ಶಟ್ಲ್ ಆಟಗಾರರೂ ಆಗಿದ್ದ ರಾಮಚಂದ್ರ ಅರ್ಬಿತ್ತಾಯರೇ ಅವರ ಕುಟುಂಬಕ್ಕೆ […]