ರಿಕ್ಷಾದಲ್ಲಿ ಬಿಟ್ಟು ಹೋದ ಕ್ಯಾಮರಾ ಮರಳಿಸಿದ ಕೋಟೇಶ್ವರದ ರಿಕ್ಷಾ ಚಾಲಕ: ಸುದ್ದಿಯಾಯ್ತು ಕೋಟೇಶ್ವರ ರಿಕ್ಷಾ ಚಾಲಕರ ಪ್ರಾಮಾಣಿಕತೆ

ಕುಂದಾಪುರ : ಬೆಂಗಳೂರಿನಿಂದ ಕಾರ್ಯ ನಿಮಿತ್ತ ಕೋಟೇಶ್ವರಕ್ಕೆ ಬಂದಿಳಿದಿದ್ದ ಇಬ್ಬರು ಯುವಕರು ಬಿಟ್ಟು ಹೋಗಿದ್ದ ಬೆಲೆ ಬಾಳುವ ಕ್ಯಾಮರಾವನ್ನು ಅವರಿಗೆ ಹಿಂತಿರುಗಿಸುವ ಮೂಲಕ ಕೋಟೇಶ್ವರದ ಬಂಡಿಕಡು ಶ್ರೀಧರ ಎನ್ನುವ ರಿಕ್ಷಾ ಚಾಲಕರು ಪ್ರಾಮಾಣಿಕತೆ ತೋರಿದ್ದಾರೆ. ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಯುವಕರು ಕೋಟೇಶ್ವರಕ್ಕೆ ಬಂದಿದ್ದರು. ಕೋಟೇಶ್ವರದ ರಥಬೀದಿಯ ಚೇತನ ರಿಕ್ಷಾ ನಿಲ್ದಾಣದಲ್ಲಿನ ರಿಕ್ಷಾ ಚಾಲಕ ಬಂಡಿಕಡು ಶ್ರೀಧರ ಎನ್ನುವವರ ರಿಕ್ಷಾದಲ್ಲಿ ಪ್ರಯಾಣಿಸಿದ್ದ ಅವರು  ರಿಕ್ಷಾದಿಂದ ಇಳಿಯುವಾಗ ತಮ್ಮ ಬೆಲೆಬಾಳುವ ಕ್ಯಾಮರಾವನ್ನು ರಿಕ್ಷಾದಲ್ಲೇ ಬಿಟ್ಟು ತೆರಳಿದ್ದರು. ರಿಕ್ಷಾದಿಂದ ಪ್ರಯಾಣಿಕರು ಇಳಿದು […]