ರಿಷಬ್ ಶೆಟ್ಟಿ ಪ್ರೊಡಕ್ಷನ್ ನಂಬರ್ 9: ಆಸಕ್ತ ನಟ-ನಟಿಯರಿಗೆ ಕಾಸ್ಟಿಂಗ್ ಕಾಲ್
ರಿಷಬ್ ಶೆಟ್ಟಿ ಪ್ರೊಡಕ್ಷನ್ ನಂಬರ್ 9- ಆಡಿಷನ್ ಮತ್ತು ಕಾಸ್ಟಿಂಗ್ ಕಾಲ್. ಎಲ್ಲಾ ಆಸಕ್ತ ನಟ ನಟಿಯರಿಗೆ ಆಹ್ವಾನ. ನಟಿಯಾಗಲು ಬಯಸುವವರ ವಯಸ್ಸು 19 ರಿಂದ 25. ನಟರಿಗೆ- 18 ರಿಂದ 60. ಉತ್ತರ ಕರ್ನಾಟಕದ ಭಾಷಾ ಸೊಗಡು ತಿಳಿದಿರುವ ನಟ ನಟಿಯರಿಗೆ ಮೊದಲ ಆದ್ಯತೆ. ಆಸಕ್ತರು ತಮ್ಮ ಫೋಟೋ ಮತ್ತು ಪ್ರೊಫೈಲ್ ಅನ್ನು [email protected] ಅಥವಾ 9380748309 ಕಳುಹಿಸಬಹುದು.
ರಿಷಭ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ ಯುರೋಪಿನ ಯಂಗ್ ಜ್ಯೂರಿ ಅವಾರ್ಡ್ ಪ್ರಶಸ್ತಿ
ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ “ನ್ಯೂ ಕರೆಂಟ್ಸ್” ಪ್ರಶಸ್ತಿಯ ನಂತರ ಇದೀಗ ರಿಷಭ್ ಶೆಟ್ಟಿ ನಿರ್ಮಾಣದ ಶಿವಮ್ಮ ಚಲನಚಿತ್ರ ಯುರೋಪಿನ ಪ್ರತಿಷ್ಠಿತ ಎಫ್3 ಕಾಂಟಿನೆಂಟ್ಸಿನ ನ 44ನೇ ಆವೃತ್ತಿಯಲ್ಲಿ ‘ಯಂಗ್ ಜ್ಯೂರಿ ಅವಾರ್ಡ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಚಿತ್ರವನ್ನು ಜಯಶಂಕರ್ ಆರ್ಯರ್ ಬರೆದು ನಿರ್ದೇಶಿಸಿದ್ದು, ರಿಶಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣ ಮಾಡಿದೆ. ದಕ್ಷಿಣ ಕೊರಿಯಾದ ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 27 ನೇ ಆವೃತ್ತಿಯಲ್ಲಿ ಕೊರಿಯನ್ ಚಲನಚಿತ್ರ ಎ ವೈಲ್ಡ್ ರೂಮರ್ ಜೊತೆಗೆ ನ್ಯೂ ಕರೆಂಟ್ಸ್ ಪ್ರಶಸ್ತಿಯನ್ನು ಗೆದ್ದು 30,000 (ಸುಮಾರು […]