9 ವರ್ಷ ಪೂರೈಸಿದ ಉಳಿದವರು ಕಂಡಂತೆ: ನಿಮ್ಮ ರಿಚಿ ಶೀಘ್ರದಲ್ಲೇ ಹಿಂತಿರುಗಲಿದ್ದಾನೆ ಎಂದ ರಕ್ಷಿತ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಯುಗಕ್ಕೆ ನಾಂದಿ ಹಾಡಿದ ಚಿತ್ರಗಳಲ್ಲಿ ಉಳಿದವರು ಕಂಡಂತೆ ಕೂಡಾ ಒಂದು ಚಿತ್ರವಾಗಿದೆ. ಚಾಲ್ತಿಯಲ್ಲಿದ್ದ ಸಿನಿಮಾ ತಯಾರಿಕೆಯ ಪಟ್ಟುಗಳನ್ನು ಬಿಟ್ಟು ಸಂಪೂರ್ಣವಾಗಿ ಹೊಸದಾದ ರೀತಿಯಲ್ಲಿ ಉಳಿದವರು ಕಂಡಂತೆ ತೆರೆಕಂಡಿತ್ತು. ಆರಂಭದಲ್ಲಿ ಉಳಿದವರು ಕಂಡಂತೆ ಜನರನ್ನು ರಂಜಿಸುವ ಬದಲಿಗೆ ಗೊಂದಲವನ್ನುಂಟು ಮಾಡಿದಂತೆ ಕಂಡರೂ ನಿಧಾನವಾಗಿ ಜನರಿಗೆ ಕಥೆಯ ಹಂದರ ಅರ್ಥವಾಗ ತೊಡಗಿತ್ತು. ಉಳಿದವರು ಕಂಡಂತೆಯ ಮೂಲಕ ಉದಯೋನ್ಮುಖ ನಟ ಮತ್ತು ದೂರದರ್ಶಿ ನಿರ್ದೇಶಕನೊಬ್ಬನು ಕನ್ನಡ ಚಿತ್ರರಂಗಕ್ಕೆ ದೊರೆತದ್ದು ಈಗ ಇತಿಹಾಸ. ಉಳಿದವರು ಕಂಡಂತೆ 9 ವರ್ಷಗಳನ್ನು […]

ಸಿಂಪಲ್ ಸ್ಟಾರ್ ಕೈಯಲ್ಲಿದೆ ನಾಲ್ಕು ಚಿತ್ರಗಳು: ಕಿರಿಕ್ ಪಾರ್ಟಿ 2 ಗೆ ವಿಭಿನ್ನ ಯೋಜನೆ ಇದೆ ಎಂದ ರಕ್ಷಿತ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಕರಾವಳಿಯ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಸದ್ಯಕ್ಕಂತೂ ಕಿರಿಕ್ ಪಾರ್ಟಿ-2 ಬರುವ ಯಾವುದೇ ಸೂಚನೆಗಳಿಲ್ಲ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್ ಆಂಟನಿ, ಪುಣ್ಯಕೋಟಿ 1 ಮತ್ತು 2, ಮಿಡ್ ನೈಟ್ ಟು ಮೋಕ್ಷ… ಇವುಗಳು ನನಗೆ […]

ಪ್ರೀತಿಯಲ್ಲಿ ಬಿದ್ದ ರಕ್ಷಿತ್ ಶೆಟ್ಟಿ: ‘ರಿಚರ್ಡ್ ಆಂಟನಿ’ ಚಿತ್ರಕಥೆ ಬರೆಯುತ್ತಿರುವ ಕಿರಿಕ್ ಹುಡುಗನ ಮನದಾಳದ ಮಾತು

ಚಲನ ಚಿತ್ರಗಳೆಂದರೆ ಹೀಗೇ ಇರಬೇಕು ಎನ್ನುವ ಸಿದ್ದ ಸೂತ್ರಗಳನ್ನು ಬದಿಗಿಟ್ಟು, ತಮ್ಮದೇ ಹಾದಿಯಲ್ಲಿ ನಡೆದು ಚಲನಚಿತ್ರವೆಂದರೆ ಚಲನಶೀಲ ಜಗತ್ತು, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡು ಕೂರುತ್ತಲೆ ಇರಬೇಕೆಂದಿಲ್ಲ. ಬದಲಾವಣೆ ಜಗದ ನಿಯಮ ಮತ್ತು ಬದಲಾವಣೆಗಳು ಒಳ್ಳೆಯದಾಗಿದ್ದರೆ ಜನ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ತೋರಿಸಿಕೊಟ್ಟವರು ಹಲವರಿದ್ದಾರೆ. ಕನ್ನಡ ಚಿತ್ರರಂಗವೂ ಈ ಬದಲಾವಣೆಗಳನ್ನು ಹಲವು ಬಾರಿ ಕಂಡಿದೆ. ಶಂಕರ್ ನಾಗ್, ರವಿಚಂದ್ರನ್, ಕಿಚ್ಚ ಸುದೀಪ್ ಮುಂತಾದವರು ಸಿದ್ದ ಸೂತ್ರಗಳನ್ನು ಬದಿಗಿಟ್ಟು ತಮ್ಮದೇ ಹಾದಿಯಲ್ಲಿ ನಡೆದು ಯಶಸ್ಸು ಕಂಡವರು. ಇದೀಗ ಅವರ ಹಾದಿಯಲ್ಲಿ […]