ವಾರಾಹಿ ಎಡದಂಡೆ ಯೋಜನೆಯಿಂದ ಜನರಿಗಾಗುತ್ತಿರುವ ತೊಂದರೆ ತಕ್ಷಣ ಬಗೆಹರಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ: ಹಾರ್ದಳ್ಳಿ-ಮಂಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ ವಾರಾಹಿ ಎಡದಂಡೆ ಕಾಮಗಾರಿಯಿಂದ ಸ್ಥಳೀಯರಿಗೆ ಸಂಪರ್ಕ ರಸ್ತೆ ಸಮಸ್ಯೆ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು. ಅವರು ಶನಿವಾರ ಬಿದ್ಕಲ್‌ಕಟ್ಟೆಯ ಕೆ.ಪಿ.ಎಸ್. ಶಾಲೆಯಲ್ಲಿ ನಡೆದ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ವ್ಯಾಪ್ತಿಯ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾರಾಹಿ ಎಡದಂಡೆ ಕಾಮಗಾರಿಯ ಕಾರಣ ಗ್ರಾಮದಲ್ಲಿ ಹಲವೆಡೆ ಸಂಪರ್ಕ ರಸ್ತೆಗಳ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ವಾರಾಹಿ […]

ಮೀನುಗಾರಿಕಾ ಸೀಮೆಎಣ್ಣೆಗೆ ಅರ್ಜಿ ಸಲ್ಲಿಸಿದವರಿಗೆ ಸೆ 13-14 ರಂದು ಜಂಟಿ ತಪಾಸಣೆ

ಉಡುಪಿ: ಆಹಾರ, ಕಂದಾಯ ಮತ್ತು ಮೀನುಗಾರಿಕಾ ಇಲಾಖೆಗಳ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಮೀನುಗಾರಿಕಾ ಸೀಮೆಎಣ್ಣೆ ಹೊಸತು ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸೆಪ್ಟಂಬರ್ 13 ರಂದು ಬೆಳಗ್ಗೆ 9.30 ಕ್ಕೆ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಶಾಲೆ ಬಳಿ ಹಾಗೂ ಮಧ್ಯಾಹ್ನ 2.30 ಕ್ಕೆ ಉಚ್ಚಿಲ ಮೊಗವೀರ ಸಭಾಭವನದ ಹತ್ತಿರ ಮತ್ತು ಸೆ. 14 ರಂದು ಬೆಳಗ್ಗೆ 9.30 ಕ್ಕೆ ಮಲ್ಪೆ ಟೆಗ್ಮಾದ ಬಳಿ ಜಂಟಿ ತಪಾಸಣೆಯನ್ನು ನಡೆಸಲಾಗುವುದು. ಹೊಸ ರಹದಾರಿ ಕೋರಿ ಅರ್ಜಿ […]

ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್: ಕೊನೆಯ ದಿನ ದಾಖಲೆಯ 72.42 ಲಕ್ಷ ಐಟಿಆರ್‌ ಸಲ್ಲಿಕೆ; ಒಟ್ಟು 5 ಕೋಟಿ 83 ಲಕ್ಷ ಐಟಿಆರ್‌ ಗಳು

ನವದೆಹಲಿ: ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯದಿನವಾಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಕೂಗು ಕೇಳಿ ಬಂದಿದ್ದರೂ ವಿತ್ತ ಇಲಾಖೆಯು ದಿನಾಂಕ ವಿಸ್ತರಣೆಗೆ ಹಿಂದೇಟು ಹಾಕಿತ್ತು. ಆದಾಗೂ, ಕೊನೆಯ ದಿನವಾದ ಜುಲೈ 31 ರವರೆಗೆ 5 ಕೋಟಿ 83 ಲಕ್ಷ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ಒಂದೇ ದಿನ 72 ಲಕ್ಷದ 42 ಸಾವಿರಕ್ಕೂ ಅಧಿಕ ಐಟಿಆರ್ ಸಲ್ಲಿಕೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಕ್ಲಪ್ತ ಸಮಯಕ್ಕೆ ಐಟಿಆರ್‌ […]

ಗೋ ಹತ್ಯೆ ನಡೆಸುವವರ ವಿರುದ್ದ ಆಸ್ತಿ ಮುಟ್ಟುಗೋಲು ಅಸ್ತ್ರ: ಮಂಗಳೂರಿನಲ್ಲಿ ಪ್ರಥಮ ಪ್ರಯೋಗ

ಮಂಗಳೂರು: ಗೋ ಹತ್ಯೆ ನಡೆಸುವವರ ವಿರುದ್ದ ಆಸ್ತಿ ಮುಟ್ಟುಗೋಲು ಅಸ್ತ್ರ ಪ್ರಯೋಗಕ್ಕೆ ಸಿದ್ದತೆ ನಡೆದಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಥಮವಾಗಿ ಜಾರಿಗೆ ಬರಲಿದೆ. ಮಂಗಳೂರು ಪೊಲೀಸರು ‌ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆ ಶುರು ಮಾಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟ ಪ್ರಕರಣದಲ್ಲಿ ಈ ಪ್ರಕ್ರಿಯೆ ಶುರುವಾಗಿದೆ. ಕಳೆದ ಭಾನುವಾರ ಅರ್ಕುಳದಲ್ಲಿ ಕಸಾಯಿಖಾನೆಗೆ ದಾಳಿ ನಡೆಸಿ 95 ಕೆ.ಜಿ ಗೋ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಖಾಲಿದ್ […]

ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ಬೇಕೆ? ಹಾಗಾದರೆ ಹಲೋ ಕಂದಾಯ ಸಚಿವರೇ ಸಹಾಯವಾಣಿ 155245 ಗೆ ಕರೆ ಮಾಡಿ

ಉಡುಪಿ: ಕುಟುಂಬದ ವಾರ್ಷಿಕ ಆದಾಯ 32,000 ರೂ. ಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಚೇಧಿತ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ಕೋರಿಕೆ ಸಲ್ಲಿಸಬಹುದಾಗಿದ್ದು, ಕಂದಾಯ ಇಲಾಖೆಯ ವಿನೂತನ ಯೋಜನೆಯಾದ ಹಲೋ ಕಂದಾಯ ಸಚಿವರೇ ಸಹಾಯವಾಣಿ ಸಂಖ್ಯೆ 155245 ಗೆ ಉಚಿತವಾಗಿ ಕರೆ ಮಾಡುವ ಮೂಲಕ ಮನೆ ಬಾಗಿಲಿನಲ್ಲೇ ಪಿಂಚಣಿ ಸೌಲಭ್ಯವನ್ನು ಪಡೆಯಬಹುದು. ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ನೋಂದಾವಣೆ ಕಡ್ಡಾಯವಾಗಿದೆ. ಈ ಯೋಜನೆಯಡಿ ಪಿಂಚಣಿ ಕೋರಿಕೆ ಸ್ವೀಕರಿಸಿದ 72 […]