ದರ್ಪಣ ನೃತ್ಯ ಸಂಸ್ಥೆಯಿಂದ ‘ತು ಹೈ ಕಾಹಂ’ ಆಲ್ಬಂ ರಿಲೀಸ್
ಉಡುಪಿ: ದರ್ಪಣ ನೃತ್ಯಸಂಸ್ಥೆ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೀನ್ ವೀಲ್ ಎಂಟರ್‌ಟೈನ್ ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಕೃಷ್ಣ-ರಾಧೆ ಪ್ರೇಮದ ಎಳೆಯನ್ನು ಇಟ್ಟುಕೊಂಡು ನಿರ್ಮಿಸಲಾದ ‘ತು ಹೈ ಕಾಹಂ’ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ಗುರುವಾರ ರಾಜ್‌ಟವರ್‌ನಲ್ಲಿ ದರ್ಪಣ ನೃತ್ಯಶಾಲೆಯಲ್ಲಿ ನೆರವೇರಿತು. ನಗರಸಭೆ ಸದಸ್ಯೆ ಅಮೃತ ಕೃಷ್ಣಮೂರ್ತಿ ವಿಡಯೋ ಗೀತೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಕಾರ್ಯಕ್ರಮವನ್ನು ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನರಸಿಂಹ ಮೂರ್ತಿ ಇದ್ದರು. ಜಯತಂತ್ರಿ ಸ್ವಾಗತಿಸಿ, ರಮಾನಂದ ಮೂರ್ತಿ ವಂದಿಸಿದರು. ದರ್ಪಣ […]