ಬಿಡುಗಡೆಗೂ ಹ್ಯಾಟ್ರಿಕ್ ಹೀರೋ ‘ಘೋಸ್ಟ್’ ಸಿನಿಮಾ ಬಗ್ಗೆ ಭಾರಿ ಕುತೂಹಲ!
ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ ಸಿನಿಮಾ ‘ಘೋಸ್ಟ್’. ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಗೆಲುವಿಗೆ ರೆಡಿಯಾಗಿರೋ ಚಿತ್ರವೂ ಹೌದು. ಇದು ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿರುವ ಪ್ಯಾನ್ ಇಂಡಿಯಾ ಸಿನಿಮಾ. ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿರೋ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.ಬಹುನಿರೀಕ್ಷಿತ ಘೋಸ್ಟ್ ಚಿತ್ರದ ಪ್ರೀ ಬ್ಯುಸಿನೆಸ್ ಜೋರಾಗಿದೆ ಎಂಬ ಮಾಹಿತಿ ಇದೆ. ಘೋಸ್ಟ್ ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. […]