ಯುವಜನತೆ ಪಾಶ್ಚಾತ್ಯ ಭಾಷೆಗಳಿಗೆ ಮರುಳಾಗುತ್ತಿರುವುದು ಖೇದಕರ ಸಂಗತಿ: ಸ್ಟ್ಯಾನಿ ಬಿ ಲೋಬೊ
ಉಡುಪಿ: ಇಂದಿನ ಯುವ ಸಮುದಾಯ ಮಾತೃ ಭಾಷೆಯನ್ನು ಮರೆತು ಪಾಶ್ಚಾತ್ಯ ಭಾಷೆಗಳಿಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಖೇದಕರ ಸಂಗತಿ. ಮಾತೃಭಾಷೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವಂತಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಹಾಗೂ ಉದ್ಯಾವರ ಚರ್ಚಿನ ಧರ್ಮಗುರುಗಳಾದ ಸ್ಟ್ಯಾನಿ ಬಿ ಲೋಬೊ ಹೇಳಿದರು. ಅವರು ಭಾನುವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2020-21 ನೇ ಸಾಲಿನ ವಾರ್ಷಿಕ ಮಹಾಸಭೆ, ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಹಾಗೂ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ […]