ಆರ್ಬಿಐ, ಯುಎಇಯ ಸೆಂಟ್ರಲ್ ಬ್ಯಾಂಕ್ ಒಪ್ಪಂದ :ಅರಬ್ ರಾಷ್ಟ್ರದಲ್ಲಿ ರುಪೀ ಮೂಲಕ ವಹಿವಾಟಿಗೆ ಅವಕಾಶ
ಗಡಿಯಾಚೆಗಿನ ವಹಿವಾಟುಗಳಿಗೆ ಆ ದೇಶದ ಕರೆನ್ಸಿಯ ಬಳಕೆ ಉತ್ತೇಜಿಸಲು ಮತ್ತು ಪಾವತಿ, ಸಂದೇಶ ವ್ಯವಸ್ಥೆಯನ್ನು ಪರಸ್ಪರ ಲಿಂಕ್ ಮಾಡುವ 2 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.ದುಬೈ, ಯುಎಇ: ಜಾಗತೀಕರಣದ ಪ್ರಭಾವದಿಂದಾಗಿ ಕರೆನ್ಸಿಗಳು ಆಯಾ ದೇಶಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಬಹುಮುಖ್ಯವಾಗಿದೆ.ಹೀಗಾಗಿ ಗಡಿಯಾಚೆ ಸ್ಥಳೀಯ ಕರೆನ್ಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್(CBUAE) ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಭಾರತ ಮತ್ತು ಯುಎಇ ಮಧ್ಯೆ ಸ್ಥಳೀಯ ಕರೆನ್ಸಿಗಳ ಮೂಲಕ ವಹಿವಾಟಿಗೆ ಒಪ್ಪಂದ ಮಾಡಿಕೊಂಡಿವೆ. ಯುಪಿಐ ಬಳಕೆಗೆ […]