ಆರ್ ಬಿಐನಿಂದ ಸಾಲಗಾರರಿಗೆ ಬಿಗ್ ರಿಲೀಫ್: ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ, ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ ಗಳ ಸಾಲದ ಇಎಂಐ ಮೂರು ತಿಂಗಳು ಮುಂದೂಡಿಕೆ

ದೆಹಲಿ: ಆರ್ ಬಿಐ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದ್ದು, ವೈಯಕ್ತಿಕ ಸಾಲ, ಗೃಹ ಸಾಲ ಹಾಗೂ ವಾಹನ ಸಾಲ ಸೇರಿದಂತೆ ಎಲ್ಲ ಮಾದರಿಯ ಸಾಲಗಳ ಇಎಂಐ ಕಂತನ್ನು ಮೂರು ತಿಂಗಳ ಮುಂದೂಡಿಕೆ ಮಾಡಿದೆ. ಇಂದು ದೆಹಲಿಯ ಆರ್ ಬಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರ್ ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಅಧಿಕೃತ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ, ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ ಗಳ ಸಾಲದ ಇಎಂಐ ಅನ್ನು ಆರ್ ಬಿಐ ಮುಂದೂಡಿಕೆ ಮಾಡಿದೆ.