ನೋಟುಗಳ ಮೇಲೆ ರವೀಂದ್ರನಾಥ ಟ್ಯಾಗೋರ್, ಎಪಿಜೆ ಅಬ್ದುಲ್ ಕಲಾಂ ವಾಟರ್‌ಮಾರ್ಕ್? ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲ್ಲಿರುವ ಆರ್‌ಬಿಐ

ನವದೆಹಲಿ: ಇದೇ ಮೊದಲ ಬಾರಿಗೆ, ಭಾರತೀಯ ನೋಟುಗಳ ಮೇಲೆ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಮತ್ತು ಭಾರತದ 11 ನೇ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವಾಟರ್‌ಮಾರ್ಕ್‌ಗಳನ್ನು ಪರಿಚಯಿಸಲು ಆರ್‌ಬಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಆರ್‌ಬಿಐ ಜೊತೆಗೆ ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಟ್ಯಾಗೋರ್ ಮತ್ತು ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಕಲಾಂ ಅವರ ಚಿತ್ರವುಳ್ಳ ವಾಟರ್‌ಮಾರ್ಕ್ ಅನ್ನು ಕೆಲವು ಮುಖಬೆಲೆಯ ನೋಟುಗಳ […]