ಸೆ. 12 ರಿಂದ 14 ರವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ

ಉಡುಪಿ: ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ, ಹೆಸರು ಸೇರ್ಪಡೆ/ತೆಗೆಯುವುದು, ವಿಳಾಸ ಬದಲಾವಣೆ, ಸದಸ್ಯರ ಹೆಸರು ತಿದ್ದುಪಡಿಗೆ , ಸೆಪ್ಟಂಬರ್ 12 ರಿಂದ 14 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8 ರ ವರೆಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿದ್ದು, ನಿಗದಿಪಡಿಸಿದ ಅವಧಿಯೊಳಗೆ ಕರ್ನಾಟಕ ಒನ್,ಗ್ರಾಮ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.  

ಸರ್ಕಾರಿ ನೌಕರರು ಮತ್ತು ಐಷಾರಾಮಿ ಕಾರು ಮಾಲೀಕರ ಬಳಿಯೂ ಬಿಪಿಎಲ್ ಕಾರ್ಡ್‌? ಇಲಾಖಾ ಕಾರ್ಯಾಚರಣೆಯಲ್ಲಿ ಗೋಲ್ ಮಾಲ್ ಬಯಲು!!

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಅಕ್ರಮ ಪಡಿತರ ಚೀಟಿದಾರರ ವಿರುದ್ಧ ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ ಸರ್ಕಾರಿ ನೌಕರರು ಮತ್ತು ಐಷಾರಾಮಿ ಕಾರು ಮಾಲೀಕರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು ಕಂಡುಬಂದಿದೆ. ಜನವರಿ 2021 ರಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಾರಂಭಿಸಿದ ಕಾರ್ಯಾಚರಣೆಯಲ್ಲಿ 13 ಕೋಟಿ ರೂ ದಂಡವನ್ನು ಸಂಗ್ರಹಿಸಿದೆ, ಇದರಲ್ಲಿ 11 ಕೋಟಿ ರೂ.ಗಳನ್ನು 17,521 ಸರ್ಕಾರಿ ನೌಕರರಿಂದಲೇ ಸಂಗ್ರಹಿಸಲಾಗಿದೆ. ತಾವು ಫಲಾನುಭವಿಗಳಾಗಲು ಅನರ್ಹವಾಗಿದ್ದರೂ ಅಂತ್ಯೋದಯ ಅನ್ನ ಯೋಜನೆ (ಎವೈವೈ) ಮತ್ತು ಆದ್ಯತಾ […]

ಗುಂಡಿಬೈಲು ಪಡಿತರ ವಿತರಣೆ ಸ್ಥಗಿತ: ಪೊರ್ಟೆಬಿಲಿಟಿ ಮೂಲಕ ಆಹಾರ ಸರಬರಾಜು ಅಬಾಧಿತ

ಉಡುಪಿ: ಉಡುಪಿ ತಾಲೂಕಿನ ಗುಂಡಿಬೈಲು ನ್ಯಾಯಬೆಲೆ ಅಂಗಡಿ ಮಾಲಿಕ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಸದ್ರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಸ್ಥಗಿತಗೊಳಿಸಲಾಗಿರುತ್ತದೆ. ಪ್ರಸ್ತುತ ಪೋರ್ಟೆಬಿಲಿಟಿ ಮೂಲಕ ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶವಿರುವುದರಿಂದ ಗುಂಡಿಬೈಲು ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಪಡಿತರದಾರರು ಅಂಬಾಗಿಲು ಹೆರ್ಗ ಸಿ.ಎ ಬ್ಯಾಂಕ್, ಪೆರಂಪಳ್ಳಿ ಹೆರ್ಗ ಸಿ.ಎ ಬ್ಯಾಂಕ್, ಆದಿ ಉಡುಪಿ ಲ್ಯಾಂಪ್ ಸೊಸೈಟಿ ಅಥವಾ ಇತರೆ ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ಆದೇಶದವರೆಗೆ ಪಡಿತರ ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ ಮತ್ತು […]

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ: ಅನ್ಯ ರಾಜ್ಯದ ಚೀಟಿದಾರರಿಗೂ ಆಧಾರ್ ಆಧಾರಿತ ಪಡಿತರ ವಿತರಣೆ

ಉಡುಪಿ: ಕೇಂದ್ರ ಸರ್ಕಾರದ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಬೇರೆ ರಾಜ್ಯದ ಪಡಿತರ ಚೀಟಿದಾರರು ಅವರ ಆಧಾರ್ ದೃಢೀಕೃತ ಬೆರಳಚ್ಚು ಬಯೋಮೆಟ್ರಿಕ್ ಅಥವಾ ಆಧಾರ್ ಆಧಾರಿತ ಒ.ಟಿ.ಪಿ ನೀಡಿ ಪಡಿತರ ಪಡೆಯಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ

ಉಡುಪಿ: ಕೇಂದ್ರ ಸರ್ಕಾರದ ‘ಆಜಾದಿ ಕಾ ಅಮೃತ ಮಹೋತ್ಸವ್’ ಕಾರ್ಯಕ್ರಮದ ಆಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜೊತೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಸಾರ್ವಜನಿಕರಿಗೆ ಉಚಿತ ಪಡಿತರ ವಿತರಿಸುವ ಯೋಜನೆ ಜಾರಿಗೊಳಿಸಿರುತ್ತದೆ. ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಎನ್.ಎಫ್.ಎಸ್.ಎ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಡುಗಡೆಯಾದ ಆಹಾರ ಧಾನ್ಯವನ್ನು ಏಪ್ರಿಲ್ ನಿಂದ ಅಂತ್ಯೋದಯ (ಎ.ಎ.ವೈ) ಚೀಟಿದಾರರಿಗೆ ಎನ್.ಎಫ್.ಎಸ್.ಎ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಾಗೂ […]