ಮಾ.17: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ

ಉಡುಪಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಮಾ.17ರಂದು ಶ್ರೀಮನ್ಮಹಾರಥೋತ್ಸವ ನೆರವೇರಲಿದೆ. ದೇಗುಲದ ವಾರ್ಷಿಕ ಮಹೋತ್ಸವದ ಅಂಗವಾಗಿ ಮಾರ್ಚ್  20ರ ವರೆಗೆ ಪ್ರತಿದಿನ ಮಹಾಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ರಂಗಪೂಜೆ ಬಲಿ, ಅಷ್ಟಾವಧಾನ ಸೇವೆಗಳು, ಉತ್ಸವ ಬಲಿ, ಪೂರ್ಣಾಹುತಿ ತೆಪ್ಪೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 18ರಂದು ರಾತ್ರಿ ಆರಾಟೋತ್ಸವ ಹಾಗೂ ಮಾ. 20ರಂದು ಬೆಳಿಗ್ಗೆ ಬ್ರಹ್ಮಕುಂಭಾಭಿಷೇಕ ಜರುಗಲಿದೆ. ಮಾ. 17ರಂದು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ ಎಂದು […]

ಫೆ.14: ಶ್ರೀಕ್ಷೇತ್ರ ಮಂದಾರ್ತಿಯ ಮನ್ಮಹಾರಥೋತ್ಸವ

ಉಡುಪಿ: ಶ್ರೀಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮನ್ಮಹಾರಥೋತ್ಸವ ಇದೇ 13ರಿಂದ 15ರ ವರೆಗೆ ದೇಗುಲದ ಆವರಣದಲ್ಲಿ ನಡೆಯಲಿದೆ. ಫೆ.13ರಂದು ಕುಂಭ ಸಂಕ್ರಮಣ ಮತ್ತು ಕೆಂಡಸೇವೆ, ಫೆ. 14ರಂದು ಮನ್ಮಹಾರಥೋತ್ಸವ ಹಾಗೂ ಫೆ. 15ರಂದು `ದೀಪೋತ್ಸವ’ ಕಾರ್ಯಕ್ರಮ ನೆರವೇರಲಿದೆ. ದೇವಸ್ಥಾನದ ಹಿನ್ನೆಲೆ: ಆವಂತಿಯ ರಾಜ ದೇವವರ್ಮನು ರಾಜ್ಯಭ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗುವಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ, ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ […]