ರಾಷ್ಟ್ರೀಯ ಮುಕ್ತ ಮಾಸ್ಟರ್ಸ್ ಅಥ್ಲೆಟಿಕ್ಸ್: 100 ಮೀಟರ್ ರೇಸನ್ನು 45.40 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದ 105 ವರ್ಷದ ಸೂಪರ್ ಗ್ರ್ಯಾನಿ!!

ವಡೋದರಾ: ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ 105 ವರ್ಷದ ಸೂಪರ್ ಗ್ರ್ಯಾನಿ(ಅಜ್ಜಿ) 45.40 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದು ಈ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಾಗಿದ್ದು, ಹರಿಯಾಣ ದಾದ್ರಿ ಜಿಲ್ಲೆಯ ರಾಮ್ ಬಾಯಿ ಎನ್ನುವ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಯಾರೂ ಊಹಿಸಲಾಗದ ದಾಖಲೆಯನ್ನು ನಿರ್ಮಿಸಿ ಸೂಪರ್ ಗ್ರ್ಯಾನಿ ಆಗಿ ಹೊರಹೊಮ್ಮಿದ್ದಾರೆ. ಒಂದು ದಾಖಲೆಯಿಂದ ತೃಪ್ತರಾಗದ ಸೂಪರ್ ಅಜ್ಜಿ ವಿದೇಶದಲ್ಲಿ ಸ್ಪರ್ಧಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. “ಇದು ತುಂಬಾ ಸಂತೋಷ […]