ಜನರ ಜೀವದ ಜತೆ ಬಿಜೆಪಿ ಶಾಸಕರ ಚೆಲ್ಲಾಟ: ರಮಾನಾಥ ರೈ
ಮಂಗಳೂರು: ಅಧಿಕಾರದ ಮದದಲ್ಲಿ ಶಾಸಕರು ಕಾಲಹರಣ ನಡೆಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಯತ್ನಿಸುತ್ತಿಲ್ಲ. ಜನರ ಜೀವನದ ಜತೆ ಜನಪ್ರತಿನಿಧಿಗಳು ಚೆಲ್ಲಾಟ ಆಡುತ್ತಿದ್ದಾರೆ. ಜನಪ್ರತಿನಿಧಿಗಳ ನಿಷ್ಕ್ರಿಯತೆಯನ್ನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ ಬಿಜೆಪಿ ಶಾಸಕರ ವಿರುದ್ಧ ಕಿಡಿ ಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳನ್ನು ಯಾರು ತಡೆಗಟ್ಟಬೇಕು..? ಶಾಸಕರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ಜನರ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಮಲದ ಕುದುರೆ ಆಪರೇಶನ್: ಬಹುಮತ […]
ಬಂಟ್ವಾಳ: ರಮಾನಾಥ ರೈ ಅವರಿಂದ ಡ್ಯಾಂ ಕಾಮಗಾರಿ ವೀಕ್ಷಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ದೋಟ ಹಾಗೂ ಸಂಗಬೆಟ್ಟು ಗ್ರಾಮದ ಮಂಜನ್‌ದೊಟ್ಟುವಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಡ್ಯಾಮ್ ಕಾಮಗಾರಿಯನ್ನು ಶುಕ್ರವಾರ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ಅವರು ೩ ಜಿಲ್ಲೆಗೆ ಸೇರಿರುವ ಈ ಪಶ್ಚಿಮ ವಾಹಿನಿ ಯೋಜನೆ ಸುಮಾರು ೨೬೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ೮೦ ಕೋಟಿ ಉಡುಪಿ ಜಿಲ್ಲೆಗೆ ಉತ್ತರ ಕನ್ನಡ ಜಿಲ್ಲೆಗೆ ೩೫ ಜೋಟಿ ಅನುದಾನ […]