ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚನೆ: ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧನ
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಮುಖಂಡನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧಿತ ಆರೋಪಿ. ಈತ ವಿವಿ ಪ್ರಾಧ್ಯಾಪಕ ವಿವೇಕ್ ಆಚಾರ್ಯ ಎನ್ನುವವರನ್ನು ಪರಿಚಯ ಮಾಡಿಕೊಂಡು. ನನಗೆ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದ್ದು, ಬೇಕಾದ ಕೆಲಸ ಮಾಡಿಸಬಲ್ಲೆ ಎಂದು ಹಲವರೊಂದಿಗೆ ತಗೆದ ಫೋಟೊ ತೋರಿಸಿ ನಂಬಿಸಿದ್ದನು. ಅಲ್ಲದೆ, ನಿಮಗೆ ರಾಯಚೂರು ವಿಶ್ವವಿದ್ಯಾಲಯ ಕುಲಪತಿಯನ್ನಾಗಿ ಮಾಡುತ್ತೇನೆಂದು ನಂಬಿಸಿ […]