ಶಿರೂರು ಮೂಲ ಮಠ ರಾಮನವಮಿ ಪ್ರಯುಕ್ತ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ
ಉಡುಪಿ: ಶಿರೂರು ಮೂಲ ಮಠದಲ್ಲಿ ರಾಮನವಮಿಯಂದು ನಡೆಯಲಿರುವ ರಥೋತ್ಸವದ ಪ್ರಯುಕ್ತ ಋಕ್ಸಂಹಿತಾ ಯಾಗ ಸಹಿತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಹಲವಾರು ಪ್ರಸಿದ್ಧ ಕಲಾವಿದರಿಂದ ಮತ್ತು ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶಿರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥರ ಉಪಸ್ಥಿತಿಯಲ್ಲಿ ನಡೆಯುತ್ತಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಿರಿಬಳಗ (ರಿ) ಕುಂಜಾರುಗಿರಿ ಇದರ ಸದಸ್ಯರಿಂದ “ಛತ್ರಪತಿ ಶಿವಾಜಿ” ಐತಿಹಾಸಿಕ ನಾಟಕ ನಡೆಯಿತು.