ರಾಮಲಲ್ಲಾ ದರ್ಶನ ಪಡೆದ ಪ್ರಧಾನಿ ಮೋದಿ-ಮುಖ್ಯಮಂತ್ರಿ ಯೋಗಿ: ಭರ್ಜರಿ ರೋಡ್ ಶೋ
ಅಯೋಧ್ಯಾ: ಜನವರಿ 22 ರಂದು ಪವಿತ್ರ ನಗರದಲ್ಲಿ ಐತಿಹಾಸಿಕ ರಾಮ ಮಂದಿರದ(Ram Mandir) ಶಂಕುಸ್ಥಾಪನೆಯ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಯ ಮೂರನೇ ಹಂತದ ಚುನಾವಣಾ ಪ್ರಚಾರದ ನಡುವೆ ಭಾನುವಾರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದರು. ಪ್ರಧಾನಿ ಮೋದಿ ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೂಡ ರಾಮ ಮಂದಿರಕ್ಕೆ ಭೇಟಿ […]
ರಾಮಲಲ್ಲಾನಿಗೆ 1.751 ಕೆಜಿ ತೂಕದ ಬೆಳ್ಳಿ ಪೊರಕೆ ನೀಡಿದ ಅಖಿಲ ಭಾರತೀಯ ಮಾಂಗ್ ಸಮಾಜದ ರಾಮ ಭಕ್ತರು
ಅಯೋಧ್ಯೆ: ‘ಅಖಿಲ ಭಾರತೀಯ ಮಾಂಗ್ ಸಮಾಜ’ಕ್ಕೆ ಸೇರಿದ ರಾಮನ ಭಕ್ತರು 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದಾನ ಮಾಡಿದರು. ಪೊರಕೆಯನ್ನು ಗರ್ಭ ಗೃಹವನ್ನು ಸ್ವಚ್ಛಗೊಳಿಸಲು ಬಳಸಬೇಕೆಂದು ಈ ಭಕ್ತರು ವಿನಂತಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ವೀಡಿಯೋ ತುಣುಕಿನಲ್ಲಿ, ಭಕ್ತರು ಬೆಳ್ಳಿ ಪೊರಕೆಯನ್ನು ಎತ್ತರಕ್ಕೆ ಎತ್ತಿ ಹಾರಗಳಿಂದ ಅಲಂಕರಿಸಿ ಮೆರವಣಿಗೆಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. #WATCH | Ayodhya: Devotees of Shri Ram from the 'Akhil Bharatiya […]
ವಿಶ್ವ ವಿಸ್ಮಿತ ಮಂದಸ್ಮಿತ ಸಜೀವ ಕಣ್ಣುಗಳ ರಾಮಲಲ್ಲಾನ ನಿರ್ಮಾತೃವಿಗೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ: ರಾಮನ ಆದೇಶದಂತೆ ಕೆಲಸ ಮಾಡಿದ್ದೇನೆ ಎಂದ ಅರುಣ್ ಯೋಗಿರಾಜ್
ಬೆಂಗಳೂರು: ವಿಶ್ವವೇ ವಿಸ್ಮಿತವಾಗಿ ನೋಡುತ್ತಿರುವ ಮಂದಸ್ಮಿತ ಸಜೀವ ನೇತ್ರಗಳ ರಾಮಲಲ್ಲಾ ವಿಗ್ರಹದ ಸೃಷ್ಟಿಕರ್ತ ಮೈಸೂರಿನ ಅರುಣ್ ಯೋಗಿರಾಜ್ ಜ.24 ರಂದು ರಾಜ್ಯಕ್ಕೆ ಮರಳಿದ್ದಾರೆ. ಅರುಣ್ ಯೋಗಿರಾಜ್ ಅವರಿಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅರುಣ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಜನರು ಅರುಣ್ ಯೋಗಿರಾಜ್ ಅವರನ್ನು ಮುತ್ತಿಕೊಂಡಿದ್ದು, ಪೇಟ ತೊಡಿಸಿ ಶಾಲು ಹೊದೆಸಿ ಗೌರವಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ದೇಶಾದ್ಯಂತ ಜನರಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿರುವ ಬಗ್ಗೆ ಹರ್ಷಿತರಾಗಿರುವ ಅರುಣ್ […]
ಅಯೋಧ್ಯೆಯಲ್ಲೊಂದು ಸುಂದರ ಘಟನೆ: ರಾಮಲಲ್ಲಾನನ್ನು ನೋಡಲು ಬಂದರೇ ಸಾಕ್ಷಾತ್ ರಾಮನ ಬಂಟ ಹನುಮ?
ಅಯೋಧೆ: ಅಯೋಧ್ಯೆಯಲ್ಲೊಂದು ವಿಲಕ್ಷಣ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಜ.23 ರ ಸಂಜೆ ವೇಳೆಗೆ ಕೋತಿಯೊಂದು ರಾಮನ ವಿಗ್ರಹವಿದ್ದ (Ram Lalla) ಗರ್ಭಗುಡಿಯನ್ನು ಪ್ರವೇಶಿಸಿ ಆಶ್ಚರ್ಯ ಸೃಷ್ಟಿಸಿದೆ. ಆದರೆ ಅದಕ್ಕಿಂತಲೂ ವಿಚಿತ್ರವೆಂದರೆ ಕೋತಿ ಯಾರಿಗೂ ಯಾವುದೇ ಅಪಾಯ ಮಾಡದೆ ತಣ್ಣನೆ ಹೊರನಡೆದಿದೆ! ಈ ಬಗ್ಗೆ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ ಮಾಹಿತಿ ಹಂಚಿಕೊಂಡಿದೆ. ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಇಂದು ನಡೆದ ಸುಂದರ ಘಟನೆಯ ವಿವರಣೆ: “ಇಂದು(ಜ.23) ಸಂಜೆ 5:50ರ ಸುಮಾರಿಗೆ ಕೋತಿಯೊಂದು ದಕ್ಷಿಣ […]
ಬ್ರಹ್ಮಾವರ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಪ್ರಯುಕ್ತ ಸತ್ಯನಾಥ ಸ್ಟೋರ್ಸ್ ನಿಂದ 5700 ಜಿಲೇಬಿ ವಿತರಣೆ
ಬ್ರಹ್ಮಾವರ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಬ್ರಹ್ಮಾವರದಲ್ಲಿರುವ ಪ್ರಸಿದ್ದ ಸತ್ಯನಾಥ ಸ್ಟೋರ್ಸ್ ಬಟ್ಟೆ ಮಳಿಗೆ ವತಿಯಿಂದ ಸಾರ್ವಜನಿಕರಿಗೆ 5700 ಜಿಲೇಬಿಗಳನ್ನು ಹಂಚಲಾಯಿತು. ಸೋಮವಾರದಂದು ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಜಿಲೇಬಿ ವಿತರಣೆ ನಡೆಯಿತು. ತೀರ್ಥಹಳ್ಳಿಯ ಸತ್ಯನಾಥ ಸ್ಟೋರ್ಸ್ ಬಟ್ಟೆ ಮಳಿಗೆ ವತಿಯಿಂದ ತೀರ್ಥಹಳ್ಳಿ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ಸತ್ಯನಾಥ ಸ್ಟೋರ್ಸ್ ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪದಲ್ಲಿ ಬಟ್ಟೆ ಮಳಿಗೆಯನ್ನು ಹೊಂದಿದ್ದು ಗ್ರಾಹಕರ ಮನ ಮೆಚ್ಚುವ ಬಟ್ಟೆಗಳ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ.