ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ನಟ ರಕ್ಷಿತ್ ಶೆಟ್ಟಿ ಭೇಟಿ

ಉಡುಪಿ‌: ಕನ್ನಡ ಚಿತ್ರ ನಟ ರಕ್ಷಿತ್ ಶೆಟ್ಟಿ ಫೆಬ್ರವರಿ 22ರಂದು ತಮ್ಮ ಹುಟ್ಟೂರಾದ ಉಡುಪಿಯಲ್ಲಿ ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ಕ್ಷೇತ್ರ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು. ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ನಂತರ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದ ರಕ್ಷಿತ್ ಶೆಟ್ಟಿ, ನಾನು ಬಾಲ್ಯದಲ್ಲಿ ಪ್ರತಿವರ್ಷ ತಂದೆಯೊಂದಿಗೆ ಕಾಪುವಿನಲ್ಲಿ ಬಾವನ ಮನೆಗೆ ಬರುವಾಗ ಮಾರಿಗುಡಿಗೆ ಬಂದು ಹೋಗುತ್ತಿದ್ದೆ, ಈಗ ಇದರ ಸಂಪೂರ್ಣ […]

ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿಯಿಂದ ಮತ್ತೊಂದು ಹಿಟ್ ಚಿತ್ರ: ಅಂದಾಜು 10 ಕೋಟಿ ಗಳಿಕೆಯತ್ತ ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ

ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ ಬಾಕ್ಸ್ ಆಫೀಸ್‌ನಲ್ಲಿ ಪ್ರಭಾವಶಾಲಿ ಚೊಚ್ಚಲ ಪ್ರದರ್ಶನವನ್ನು ಮಾಡಿದ್ದು, ಭಾರತದಲ್ಲಿ ಬಿಡುಗಡೆಯಾದ ಆರಂಭಿಕ ನಾಲ್ಕು ದಿನಗಳಲ್ಲಿ ಸುಮಾರು 9.34 ಕೋಟಿ ನಿವ್ವಳ ಗಳಿಕೆಯನ್ನು ಸಂಗ್ರಹಿಸಿದೆ. ಚಿತ್ರವು ಐದನೇ ದಿನ ಕೂಡಾ ತನ್ನ ಯಶಸ್ವಿ ಓಟವನ್ನು ಮುಂದುವರೆಸುವ ನಿರೀಕ್ಷೆಯಿದೆ. ನಿವ್ವಳ ಗಳಿಕೆಯಲ್ಲಿ ಅಂದಾಜು 1.39 ಕೋಟಿ ಬಾಕ್ಸ್ ಆಫೀಸ್ ಸಂಗ್ರಹವನ್ನು ನಿರೀಕ್ಷಿಸಲಾಗಿದೆ. ನಿವ್ವಳ ಸಂಗ್ರಹ ದಿನ 1 [1 ನೇ ಶುಕ್ರವಾರ] ₹ 1.95 ಕೋಟಿ,  ದಿನ 2 [1 ನೇ […]

ಮತ್ತೊಮ್ಮೆ ಮಾಸ್ ಲುಕ್ ನಲ್ಲಿ ತೆರೆಗೆ ಬರಲಿದ್ದಾರೆ ರಾಜ್.ಬಿ.ಶೆಟ್ಟಿ: ಟೋಬಿ ಟ್ರೈಲರ್ ಸೃಷ್ಟಿಸಿದೆ ಟ್ರೆಂಡ್!!

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ಮತ್ತು ವೃಷಭ ವಾಹನದಂತಹ ಚಲನಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ರಾಜ್.ಬಿ.ಶೆಟ್ಟಿ ಇದೀಗ ಮತ್ತೊಮ್ಮೆ ಟೋಬಿ ಮೂಲಕ ಮಾಸ್ ಲುಕ್ ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಬಹುನಿರೀಕ್ಷಿತ ಟೋಬಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅದಾಗಲೇ 2 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದು ಟ್ರೆಂಡ್ ಸೃಷ್ಟಿಸಿದೆ. ರಾಜ್ ಗೆಳೆಯರಾದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ರಾಜ್.ಬಿ.ಶೆಟ್ಟಿ ಚಿತ್ರಕಥೆ ಬರೆದು, ನಟಿಸಿರುವ ಚಿತ್ರವು ಬಹಳ ಕುತೂಹಲಗಳನ್ನು […]

ಜುಲೈ 21 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ

ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿರುವ ಬಹು ನಿರೀಕ್ಷಿತ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಜುಲೈ 21 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋ, ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಫಿಲ್ಮ್ಸ್ ಬ್ಯಾನರ್ ನಡಿ ಚಿತ್ರವು ಮೂಡಿಬಂದಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ. ಖುದ್ದು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ದಿಗಂತ್ ಹಾಗೂ ರಮ್ಯಾ ಕೂಡಾ ಚಿಕ್ಕ ಪಾತ್ರದಲ್ಲಿ ಮಿಂಚಲಿದ್ದಾರೆ […]