ಯುವಕ ಯುವತಿಯರು ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶ ಕಟ್ಟುವ ನಾಯಕರಾಗಬೇಕು: ಡಾ.ಲಕ್ಷ್ಮಣ ಕುಕ್ಕುಡೆ

ಗಂಗೊಳ್ಳಿ : ಯುವಕ ಯುವತಿಯರು ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶ ಕಟ್ಟುವ ನಾಯಕರಾಗಬೇಕು. ಉನ್ನತ ಶಿಕ್ಷಣ ಪಡೆಯುವ ಮೂಲಕ ಸಶಕ್ತರಾಗಬೇಕು ಎಂದು ಮಂಗಳೂರು ಯುನಿರ್ವಸಿಟಿ ಕಾಲೇಜಿನ ಅಸೋಸಿಯೆಟ್ ಪ್ರೋಫೆಸರ್ ಡಾ.ಲಕ್ಷ್ಮಣ ಕುಕ್ಕುಡೆ ಹೇಳಿದರು. ಮೇಲ್‍ಗಂಗೊಳ್ಳಿಉ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಜರಗಿದ ಡಾ.ಅಂಬೇಡ್ಕರ್ ಯುವಕ ಮಂಡಲ ಮೇಲ್‍ಗಂಗೊಳ್ಳಿ ಇದರ 32ನೇ ವಾರ್ಷಿಕೋತ್ಸವ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‍ಗಂಗೊಳ್ಳಿ ಇವುಗಳ 26ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮದ […]