ಮಂಚಿ: ಜನರಲ್ಲಿ ಭೀತಿ ಹುಟ್ಟಿಸಿದ್ದ ಹೆಬ್ಬಾವು ಕೊನೆಗೂ ಸೆರೆ
ಮಣಿಪಾಲ: ಕಳೆದ ಮೂರ್ನಾಲ್ಕು ದಿನಗಳಿಂದ 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವೊಂದು ಕಡೆಗೂ ಸೆರೆಯಾಗಿದೆ. ನಿನ್ನೆ ರಾತ್ರಿ ರಾಜೀವನಗರದ ಗಣೇಶ್ ಆಚಾರ್ಯ ಎಂಬುವವರ ಮನೆಯ ಸಮೀಪ ಈ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ದೂರದ ಕಾಡಿಗೆ ಬಿಡಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಗಣೇಶ್ ಅವರ ಮನೆಯ ಬೇಲಿಯ ಬದಿಯಲ್ಲಿ ಈ ಹೆಬ್ಬಾವು ಪ್ರತ್ಯೇಕ್ಷಗೊಂಡಿತ್ತು. ಕೂಡಲೇ ಮನೆಯವರು ಉರಗ ತಜ್ಞ ಸುಧೀರ್ ರಾಜೀವನಗರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. […]