ಪೇಜಾವರ ಶ್ರೀಗಳಿಗೆ ರಾಜಸ್ಥಾನ ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನದ ಗೌರವ ಸಮರ್ಪಣೆ
ಹರಿದ್ವಾರ: ಸುಮಾರು 5 ಶತಮಾನಗಳ ಇತಿಹಾಸ ಇರುವ ರಾಜಸ್ಥಾನದ ( ಮಹಾಭಾರತದ ತ್ರಿಗರ್ತದೇಶ) ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನದ ಪ್ರೇಮಪೀಠದ ( ಸಂತ ಮೀರಾಬಾಯಿ ಪರಂಪರೆ) ಆಚಾರ್ಯ ಲಲಿತ್ ಮೋಹನ್ ಓಜಾ ಅವರು ಹರಿದ್ವಾರದ ಪೇಜಾವರ ಶಾಖಾ ಮಠದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ರಾಜಸ್ತಾನದ ಸಾಂಪ್ರದಾಯಿಕ ಪೇಟಾ ತೊಡಿಸಿ ಗೌರವಿಸಿದರು. ಉಡುಪಿ ಅಷ್ಟಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಈ ಕ್ಷೇತ್ರವನ್ನು ಶ್ರೀ ಓಜಾರವರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಮಧ್ವಮತಪ್ರಸಾರಕಾರ್ಯ ನಡೆಸುತ್ತಿದ್ದಾರೆ. ಆದ್ದರಿಂದ ಉತ್ತರಭಾರತಕ್ಕೆ […]