ಮಾ. 4 ರಂದು ಧನ್ಯಶ್ರೀ ಪ್ರಭು ಇವರಿಂದ ‘ಭಾವ’ ಭರತನಾಟ್ಯ ಪ್ರದರ್ಶನ

ಉಡುಪಿ: ಉಪಾಧ್ಯೇ ಸ್ಕೂಲ್ ಆಫ್ ಡಾನ್ಸ್ ಪ್ರಸ್ತುತ ಪಡಿಸುವ ‘ಭಾವ’ ಭರತನಾಟ್ಯ ನೃತ್ಯ ಪ್ರದರ್ಶನವು ಮಾ.4 ರಂದು ಸಂಜೆ 7 ಗಂಟೆಯಿಂದ ಉಡುಪಿ ಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ನಡೆಯಲಿದ್ದು, ಧನ್ಯಶ್ರೀ ಪ್ರಭು ಭರತನಾಟ್ಯ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ ಗುರು ಉಲ್ಲಾಳ ಮೋಹನ್ ಕುಮಾರ್ ಹಾಗೂ ನಾಟ್ಯ ಮಯೂರಿ ಗುರು ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಭಾಗವಹಿಸಲಿದ್ದಾರೆ.

ಭಗವಂತನ ಸಾಕ್ಷಾತ್ಕರಿಸುವ ಸಂಸ್ಕೃತವು ಸರ್ವ ಭಾಷೆಗಳ ತಾಯಿ: ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ

ಉಡುಪಿ: ಮಧ್ವಾಚಾರ್ಯರ ಗುರುಗಳಾದ ಅಚ್ಯುತಪ್ರಜ್ಞಾಚಾರ್ಯರು ಉಡುಪಿಯಲ್ಲಿ ಹಿಂದಿನಿಂದಲೂ ತತ್ತ್ವವಾದದ ಶಾಲೆಯನ್ನು ಆರಂಭಿಸಿದ್ದರು. ಅದನ್ನೇ ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಪಾಠಶಾಲೆಯು ಬೋಧಿಸುತ್ತಿದೆ. ಪರಮಾತ್ಮನು ತ್ರೈಕಾಲಿಕವಾಗಿಯೂ ಸತ್ಯನಾದವನು. ಅವನನ್ನು ತಿಳಿಸುವ ಭಾಷೆಯಾದ ಸಂಸ್ಕೃತ ಭಾಷೆಯೂ ಕೂಡ ಎಂದಿಗೂ ಬದಲಾವಣೆಯಾಗದೇ ಎಲ್ಲಾ ಭಾಷೆಗಳ ತಾಯಿಯೆಂದೆನಿಸಿ ಸತ್ಯವಾಗಿದೆ. ಭಗವಂತನಿಗೂ ಸಂಸ್ಕೃತಕ್ಕೂ ಬಿಂಬ – ಪ್ರತಿಬಿಂಬ ಭಾವವು ಇದೆ ಎಂಬುವುದನ್ನು ಋಗ್ವೇದವು ಪ್ರತಿಪಾದಿಸುತ್ತಿದೆ. ಪ್ರತಿಯೊಂದು ಭಾಷೆಯಿಂದಲೂ ಭಗವಂತನನ್ನು ಸ್ತುತಿಸಬಹುದು ಅದು ಭಗವಂತನನ್ನು ತಲುಪುವುದು ಆದರೆ ಸಂಸ್ಕೃತದಲ್ಲಿ ಮಾಡಿದ ಪ್ರಾರ್ಥನೆಯು ಎಲ್ಲಾ ವಿಧವಾದ ಪ್ರಾರ್ಥನೆಗಳನ್ನೊಳಗೊಂಡಿದೆ ಎಂದು ಶ್ರೀ […]

ದಿವ್ಯಾಂಗರ ಜೊತೆ ಕೈಜೋಡಿಸಿ ಮುಖ್ಯವಾಹಿನಿಗೆ ಕರೆತನ್ನಿ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಉಡುಪಿ: ಡಿ 16 ಮತ್ತು 17 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಿವ್ಯಾಂಗರ ಮಾಹಿತಿ ಕಾರ್ಯಗಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು ಇದರ ಸಮಾರೋಪ ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ಶ್ರೀಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರು ಶ್ರೀ ಪರ್ಯಾಯ ಶ್ರೀ ಕೃಷ್ಣಾಪುರ ವಹಿಸಿದ್ದು, ತಮ್ಮ ಅನುಗ್ರಹ ಭಾಷಣದಲ್ಲಿ ದಿವ್ಯಾಂಗರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗುವಲ್ಲಿ ಸಮಾಜದ ಎಲ್ಲಾ ನಾಗರಿಕರು ತಮ್ಮ ಕೆಲಸ ನಿರ್ವಹಿಸುವುದರೊಂದಿಗೆ ದಿವ್ಯಾಂಗರ ಜೊತೆಗೂ ಕೈ ಜೋಡಿಸಿ ಶ್ರೀ ಕೃಷ್ಣ […]

ಕಿಶೋರ ಯಕ್ಷಗಾನ ಸಂಭ್ರಮ -2022 ಸಮಾರೋಪ ಸಮಾರಂಭ; ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ,ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ಕಿಶೋರ ಯಕ್ಷಗಾನ ಸಂಭ್ರಮ -2022ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ನೀಡಿದ ಗುರುಗಳನ್ನು ಸನ್ಮಾನಿಸಿದರು. ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವು ಹಿಂದಿನ ಅಶಿಕ್ಷಿತ ಜನತೆಗೆ ದೇವರ ಪರಿಚಯ ಮತ್ತು ಪುರಾಣಗಳ ಸಾರವನ್ನು ತಿಳಿಸಿದೆ. ಈಗಿನ ಪ್ರಜೆಗಳಿಗೆ ಅಧ್ಯಾತ್ಮದ ಬಗ್ಗೆ ತಿಳಿಯಲು ಇದು ಉತ್ತಮವಾದ […]

ಡಿಸೆಂಬರ್ 11 ರಂದು ಸಾಧಕ ಶಾಲೆ ಮತ್ತು ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಸಾಧನೆಯನ್ನು ಮಾಡಿರುವ ಶಾಲೆ, ಕಾಲೇಜುಗಳನ್ನು ಗುರುತಿಸಿ, ಗೌರವಿಸುವ ಸಾಧಕ ಶಾಲೆ ಮತ್ತು ಸಾಧಕ ಶಿಕ್ಷಕ ಪ್ರಶಸ್ತಿ ಕಾರ್ಯಕ್ರಮವು ಡಿಸೆಂಬರ್ 11 ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದ್ದು, ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಪರ್ಯಾಯ ಮಠಾಧೀಶರು ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ. ಸಾಧಕ ಶಾಲೆ ಪ್ರಶಸ್ತಿ- ಪದವಿಪೂರ್ವ ಕಾಲೇಜು […]