ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಆಮ್​ಸ್ಟರ್​ಡ್ಯಾಮ್​ನಲ್ಲಿ ಇಂಡಿಯನ್ ರೆಸ್ಟೋರೆಂಟ್

ಭಾರತದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ನೆದರ್​ಲ್ಯಾಂಡ್​ನ ರಾಜಧಾನಿ ಆಮ್​ಸ್ಟರ್​ಡ್ಯಾಮ್​ನಲ್ಲಿ ರೆಸ್ಟೋರೆಂಟ್​ ಆರಂಭಿಸಿದ್ದಾರೆ. ಮಾಜಿ, ಹಾಲಿ ಆಟಗಾರರು ಕ್ರಿಕೆಟ್​ ಆಟವಲ್ಲದೇ, ಉದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಅದಕ್ಕೆ ರೈನಾ ಇಂಡಿಯನ್ ರೆಸ್ಟೋರೆಂಟ್ ಎಂದು ಹೆಸರಿಟ್ಟಿದ್ದಾರೆ. ಸ್ವತಃ ಆಹಾರ ಪ್ರೇಮಿಯೂ ಆಗಿರುವ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಹೊಸ ಇನಿಂಗ್ಸ್​ ಆರಂಭಿಸಿದ್ದು, ನೆದರ್​ಲ್ಯಾಂಡ್​​ನ ಆಮ್​ಸ್ಟರ್​ಡ್ಯಾಮ್​ನಲ್ಲಿ ತಮ್ಮದೇ ಹೆಸರಿನಲ್ಲಿ ರೆಸ್ಟೋರೆಂಟ್​ ಶುರು ಮಾಡಿದ್ದಾರೆ. ರೆಸ್ಟೋರೆಂಟ್​ನ ಕೆಲ ಚಿತ್ರಗಳನ್ನು ಟ್ವೀಟ್​ ಮಾಡಿ ಹಂಚಿಕೊಂಡಿದ್ದಾರೆ. ಇದಕ್ಕೆ ಬ್ಯಾಟಿಂಗ್​ ಕಿಂಗ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು […]