ಕುಡಿಯೋದೆ ನಮ್ ವೀಕ್ನೆಸ್ಸು ಅನ್ನುತ್ತಿರುವ ಕೋತಿ: ಗ್ರಾಹಕರ ಕೈಯಿಂದ ಬಿಯರ್ ಬಾಟಲಿ ಕಸಿಯುವ ಕೋತಿ ವೀಡಿಯೋ ವೈರಲ್
ರಾಯಬರೇಲಿ: ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಅನ್ನು ಗಟಗಟ ಕುಡಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಕೋತಿ, ಹತ್ತಿರದ ವೈನ್ ಶಾಪ್‌ನಿಂದ ಮದ್ಯ ಖರೀದಿಸಲು ಬರುವವರ ಕೈಯಿಂದ ಮದ್ಯವನ್ನು ಕಸಿದುಕೊಳ್ಳುತ್ತದೆ ಎಂದು ಸುದ್ದಿ ಸಂಸ್ಥೆ ಆಜ್‌ತಕ್ ವರದಿ ಮಾಡಿದೆ. ವೈನ್ ಶಾಪ್ ಮಾಲಿಕ ಕೋತಿಯ ವರ್ತನೆಯಿಂದ ಬೇಸತ್ತು ಅಧಿಕಾರಿಗಳಿಗೆ ದೂರು ನೀಡಿದ್ದರೂ, ಅಧಿಕಾರಿಗಳನ್ನು ಮಂಗನನ್ನು ಓಡಿಸಿ ಎಂದು ಉದಾಸೀನ ತೋರಿದ್ದಾರೆ. ವೀಡೀಯೋ ವೈರಲ್ […]